ಆಕಸ್ಮಿಕವಾಗಿ ಬೆಂಕಿ ತಗಲಿ ದನದ ಕೊಟ್ಟಿಗೆ ಭಸ್ಮ, ಜಾನುವಾರು ಸಾವು, ಎಲ್ಲಿ?

ಗದಗ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಜಾನವಾರು ಸಾವನ್ನಪ್ಪಿರೋ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಪಡಿಯಪ್ಪ ಕೊಳ್ಳಿಗೆ ಎಂಬುವವರಿಗೆ ಸೇರಿದ್ದ ಆಕಳು ಮತ್ತು ಎತ್ತು ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಜೊತೆಗೆ, ಕೊಟ್ಟಿಗೆಯಲ್ಲಿದ್ದ ಮತ್ತೆರಡು ದನಗಳಿಗೆ ಗಂಭೀರ ಗಾಯಗಳಾಗಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. ಆದರೆ, ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರಗಳನ್ನ ಪಡಿಯಪ್ಪ ಕಳೆದುಕೊಂಡಿದ್ದಾರೆ.

Related Tags:

Related Posts :

Category:

error: Content is protected !!