ರಾಮ ಮಂದಿರ ಭೂಮಿ ಪೂಜೆಗೆ ‘ಹಿರಿಯರಾದ’ ಅಡ್ವಾಣಿ, ಜೋಶಿಗೆ ಆಹ್ವಾನವಿಲ್ಲ!?

ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ದೇವಸ್ಥಾನದ ಭೂಮಿ ಪೂಜೆ ಸಮಾರಂಭವು ಆಗಸ್ಟ್​ 5ಕ್ಕೆ ಆಯೋಜಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದ್ದಂತೆ ದೇಶದ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಆದರೆ, ಉನ್ನತ ಮೂಲಗಳ ಪ್ರಕಾರ ಬಿಜೆಪಿ ಪಕ್ಷದ ವರಿಷ್ಠ ಲಾಲ್​ ಕೃಷ್ಣ ಅಡ್ವಾಣಿ ಹಾಗೂ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್​ ಜೋಶಿ ಅವರಿಗೆ ಈವರೆಗೆ ಆಮಂತ್ರಣ ಪತ್ರ ನೀಡಿಲ್ಲವಂತೆ. ಆದರೆ, ಪಕ್ಷದ ಇತರೆ ನಾಯಕರಾದ ಉಮಾ ಭಾರತಿ ಹಾಗೂ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ರಿಗೆ ಆಮಂತ್ರಣ ನೀಡಲಾಗಿದೆ.

ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಕಳೆದ ವಾರ ಲಕ್ನೋನಲ್ಲಿರುವ CBI ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಸ್​ಗೆ ಹಾಜರಾಗಿದ್ದರು. ಜೊತೆಗೆ, ಈ ಪ್ರಕರಣದಲ್ಲಿ ಮುರಳಿ ಮನೋಹರ್​ ಜೋಶಿ ಹಾಗೂ ಉಮಾ ಭಾರತಿಯವರ ಹೆಸರು ಸಹ ತಳುಕು ಹಾಕಲಾಗಿತ್ತು.

ಆದರೆ, ಕೇಂದ್ರ ಸರ್ಕಾರದ ಕೊವಿಡ್​ ನಿಯಮಾವಳಿಯ ಪ್ರಕಾರ 65ಕ್ಕಿಂತ ಹೆಚ್ಚು ವಯೋಮಿತಿಯವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಉಲ್ಲೇಖಿಸಲಾಗಿದೆಯಂತೆ. ಈ ಕಾರಣಕ್ಕಾಗಿ ಹಿರಿಯರಾದ ಅಡ್ವಾಣಿ (92) ಮತ್ತು ಜೋಶಿಗೆ (86) ಆಮಂತ್ರಣ ನೀಡಲಾಗಿಲ್ಲ ಎಂಬ ಮಾತೂ ಸಹ ಕೇಳಿಬಂದಿದೆ.

Related Tags:

Related Posts :

Category:

error: Content is protected !!