ನ್ಯಾಷನಲ್ ಟ್ರಾವೆಲ್ಸ್​ ಬಸ್​ನಲ್ಲಿ ಬಂದಿಳಿದ ಪಾದರಾಯನಪುರ ಪುಂಡರಿಗೆ Grand Welcome!

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪಾದರಾಯನಪುರದ ಪುಂಡರಿಗೆ ‘ಕೈ’ ಶಾಸಕ ಜಮೀರ್ ಅಹ್ಮದ್ ಅದ್ಧೂರಿ ಸ್ವಾಗತದೊಂದಿಗೆ ಏರಿಯಾಗೆ ಬರ ಮಾಡಿಕೊಂಡಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ ಮೇಲೆ ಈ ಪುಂಡರು ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಷರತ್ತುಬದ್ಧ ಜಾಮೀನು ಮೇರೆಗೆ ಇವರನ್ನ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾದ ಆರೋಪಿಗಳನ್ನ ಜಮೀರ್ ಅಹ್ಮದ್ ಅದ್ಧೂರಿ ಸ್ವಾಗತದೊಂದಿಗೆ ಬರ ಮಾಡಿಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಆರೋಪಿಗಳು ಜೈಲಿನಿಂದ ಪಾದರಾಯನಪುರಕ್ಕೆ ಬರಲು ಜಮೀರ್ ನ್ಯಾಷನಲ್ ಟ್ರಾವೆಲ್ಸ್​ನಲ್ಲಿ ಬಸ್ ಬುಕ್ ಮಾಡಿ ಬಸ್ ವ್ಯವಸ್ಥೆ ಮಾಡಿಸಿದ್ದಾರೆ. ಆರೋಪಿಗಳು ಪಾದರಾಯನಪುರಕ್ಕೆ ಪಾದ ಇಡ್ತಿದ್ದಂತೆ ಜಮೀರ್ ಅವರಿಗೆ ಸ್ಯಾನಿಟೈಸರ್ ನೀಡಿ ಕಳುಹಿಸುತ್ತಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more