ಲಾಕ್​ಡೌನ್ ಹಿನ್ನೆಲೆ ಖರೀದಿಗೆ ಮುಗಿಬಿದ್ದ ಜನ, ಅಂಗಡಿಗಳ ಮುಂದೆ ಕ್ಯೂ

ಬೆಂಗಳೂರು: ರಾತ್ರಿ 8ರಿಂದ 1 ವಾರ ಬೆಂಗಳೂರು ಲಾಕ್‌ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಸ್ತು ಖರೀದಿಗೆ ಸೂಪರ್ ಮಾರ್ಕೆಟ್‌ಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸೂಪರ್ ಮಾರ್ಕೆಟ್ ಮುಂದೆ ಜನ ಸಾಲು ಸಾಲಾಗಿ ನಿಂತು ಖರೀದಿಗೆ ಮುಂದಾಗಿರುವ ದೃಶ್ಯಗಳು ಕಂಡು ಬಂದಿವೆ.

ದೈಹಿಕ ಅಂತರ ದೃಷ್ಟಿಯಿಂದ 10 ಜನರಿಗೆ ಮಾತ್ರ ಸೂಪರ್ ಮಾರ್ಕೆಟ್ ಒಳಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಆ 10 ಜನರ ಸರದಿ ಮುಗಿದ ಬಳಿಕ ಉಳಿದವರನ್ನು 10 ಜನರಂತೆ ಖರೀದಿಗೆ ಅವಕಾಶ ನೀಡಲಾಆಗುತ್ತಿದೆ.

ಇನ್ನು ಜನರದ ಅನೇಕ ಅಂಗಡಿ ಮುಂಗಟ್ಟುಗಳ ಮುಂದೆ ಇದೇ ರೀತಿಯ ದೃಶ್ಯ ಕಂಡು ಬಂದಿದೆ. ಬೆಂಗಳೂರು ಒಂದು ವಾರ ಸ್ತಬ್ಧವಾಗಲಿದ್ದು, ಒಂದು ವಾರಕ್ಕೆ ಬೇಕಾಗುವ ಎಲ್ಲಾ ಸಾಮಾನು ಇಂದೇ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಮಾಡಲಾಗುತ್ತಿದ್ದು, ಇದೂ ವಿಸ್ತರಣೆಯಾಗುವ ಸಾಧ್ಯತೆ ಇದೆ.

Related Tags:

Related Posts :

Category:

error: Content is protected !!