ಮನೆಯವರ ವಿರೋಧದ ನಡುವೆಯೂ ವಿವಾಹ: ರಕ್ಷಣೆಗಾಗಿ ವಿಡಿಯೋ ಹರಿಬಿಟ್ಟ ಪ್ರೇಮಿಗಳು

ಕೋಲಾರ: ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಪ್ರೇಮಿಗಳು ರಕ್ಷಣೆಗಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೋಲಾರ ತಾಲೂಕಿನ ನುಕ್ಕನಹಳ್ಳಿ ಗ್ರಾಮದ ಅಶ್ವಿನಿ ಹಾಗು ಶಿಳ್ಳಂಗೆರೆ ಗ್ರಾಮದ ಶ್ರೀನಿವಾಸ್ ಪ್ರೀತಿಸಿ ಮದುವೆಯಾದ ಜೋಡಿ.

ಮನೆಯವರ ವಿರೋಧದ ನಡುವೆಯೂ ಪ್ರೇಮಿಗಳು ಅಂತರ್ಜಾತಿ ವಿವಾಹವಾಗಿದ್ದಾರೆ. ಹುಡುಗಿ ಕಡೆಯ ಮನೆಯವರಿಂದ ಪ್ರಾಣಬೆದರಿಕೆ ಹಿನ್ನೆಲೆಯಲ್ಲಿ ಪ್ರೇಮಿಗಳು ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ರಿಜಿಸ್ಟರ್ ಮ್ಯಾರೇಜ್ ಆಗಿರುವ ಪ್ರೇಮಿಗಳು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಪ್ರೇಮಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Tags:

Related Posts :

Category: