ಲಕ್ಕಿ ಡ್ರಾ ಹೆಸರಲ್ಲಿ ವಂಚನೆ: ಹಣ ಕಟ್ಟಿಸಿಕೊಂಡ ಖದೀಮರು ಮಾಡಿದ್ದೇನು ಗೊತ್ತಾ?

ಬಾಗಲಕೋಟೆ: ಲಕ್ಕಿ ಡ್ರಾ ಹೆಸರಿನಲ್ಲಿ ಅಮಾಯಕ ಮುಗ್ದ ಜನರಿಗೆ ಮಕ್ಮಲ್ ಟೋಪಿ ಹಾಕಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬಾದಾಮಿ ತಾಲೂಕಿನ10ಕ್ಕೂ ಹೆಚ್ಚು ಹಳ್ಳಿ ಜನರಿಂದ 20 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮಹಾಮೋಸ ಮಾಡಿದ್ದಾರೆ.

ಬಾಗಲಕೋಟೆ ತಾಲೂಕಿನ ಸೀಗಿಕೇರಿ, ಕದಂಪುರ ಗ್ರಾಮ, ಬಾದಾಮಿ ತಾಲೂಕಿನ ನೀರಲಕೇರಿ, ಸುಳಿಕೇರಿ ಗ್ರಾಮ, ಹುನಗುಂದ ತಾಲೂಕಿನ ಹಿರೇಮಾಗಿ ಸೇರಿದಂತೆ ಹಲವು ಗ್ರಾಮಸ್ಥರಿಗೆ ವಂಚನೆ ಮಾಡಿದ್ದಾರೆ. ಲಕ್ಕಿ ಡ್ರಾದಲ್ಲಿ ಬೈಕ್, ಲ್ಯಾಪ್​ಟಾಪ್, ಟಿವಿ, ಫ್ರಿಡ್ಜ್​, ಮೊಬೈಲ್, ಫರ್ನಿಚರ್, ಫ್ಯಾನ್ ಸೇರಿ ಹಲವು ವಸ್ತುಗಳನ್ನು ನೀಡುವ ಆಮಿಷವೊಡ್ಡಿದ್ದರು. ಜಿಎಸ್​ಎಸ್ ಎಂಟರ್ ಪ್ರೈಸಸ್ ಹೆಸರಲ್ಲಿ ಒಬ್ಬೊಬ್ಬರಿಂದ 800 ರೂಪಾಯಿ ಪಡೆದು ಪರಾರಿಯಾಗಿದ್ದಾರೆ.

ಫೆ.21 ರಂದು ಲಕ್ಕಿ ಡ್ರಾ ಮಾಡುವುದಾಗಿ ಹೇಳಿ ಸಚಿನ್ ದೊಡ್ಡಮನಿ ಹಾಗೂ ತಂಡದವರು ಮೋಸ ಮಾಡಿ ನಾಪತ್ತೆಯಾಗಿದ್ದಾರೆ. ಈ ಸಂಬಂಧ ವಂಚನೆಗೊಳಗಾದ ಗ್ರಾಮಸ್ಥರು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!