ಸಾತನೂರಿನಲ್ಲಿಯೇ ಡಿಕೆಶಿ ಪದಗ್ರಹಣ ಕಾರ್ಯಕ್ರಮ ನೋಡಲು ಜನರ ನಿರಾಸಕ್ತಿ!

ಮಂಡ್ಯ: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ಇಂದು ಅಧೃಕೃತವಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಭಾರೀ ಸಮಾರಂಭ ನಡೆಯುತ್ತಿದೆ. ಆದ್ರೆ ಅವರ ಹುಟ್ಟುರಿನಲ್ಲಿಯೇ ಈ ಸಮಾರಂಭಕ್ಕೆ ಸಂಬಂಧಿಸಿದಂತೆ ಜನರ ನಿರಾಶಕ್ತಿ ತೋರುತ್ತಿದ್ದಾರೆ.

ಹೌದು ಡಿಕೆ ಶಿವಕುಮಾರ್‌ ಅವರ ಪದಗ್ರಹಣದ ಪ್ರತಿಜ್ಞಾ ಸಮಾರಂಭದ ನೇರ ಪ್ರಸಾರಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಹಾಗೇನೇ ಅವರ ತವರು ಸಾತನೂರಿನ ವೆಂಕಟೇಶ್ವರ ಚಿತ್ರಮಂದಿರವನ್ನ ಬಾಡಿಗೆಗೆ ಪಡೆದು ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆದ್ರೆ ಸಮಾರಂಭದ ನೇರ ಪ್ರಸಾರ ನೋಡಲು ಸಾಕಷ್ಟು ಜನರೇ ಇಲ್ಲದಂತಾಗಿದೆ. ಸುಮಾರು 400 ಜನರು ನೋಡಬಹುದಾದಷ್ಟು ಜಾಗ ಇಲ್ಲಿದೆ. ಆದ್ರೆ ಕೇವಲ ಬೆರಳೆಣಿಕೆಯಷ್ಟು ಜನ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಚಿತ್ರಮಂದಿರದ ಗೇಟ್‌ ಹತ್ತಿರ ನಿಂತು ಜನರನ್ನ ಬನ್ನಿ ಬನ್ನಿ ಅಂತಾ ಕರೆಯುತ್ತಿದ್ದಾರೆ.

Related Tags:

Related Posts :

Category:

error: Content is protected !!