ತೋಳ ಚಂದ್ರಗ್ರಹಣ ನಡೆಯೋದು ಹೇಗೆ? ಗ್ರಹಣ ಎಲ್ಲೆಲ್ಲಿ ಯಾವಾಗ ಗೋಚರವಾಗುತ್ತೆ?

ಮೊನ್ನೆ ಮೊನ್ನೆಯಷ್ಟೇ ಸಂಭವಿಸಿದ ಸೂರ್ಯಗ್ರಹಣ ಕಣ್ಣಲ್ಲಿ ಇನ್ನೂ ಹಸಿ ಹಸಿಯಾಗಿರೋವಾಗ್ಲೇ ಇಡೀ ಜಗತ್ತು ಮತ್ತೊಂದು ಗ್ರಹಣಕ್ಕೆ ಸಾಕ್ಷಿಯಾಗ್ತಿದೆ. ಆ ಗ್ರಹಣ ಮತ್ಯಾವುದೂ ಅಲ್ಲ. ತೋಳ ಚಂದ್ರಗ್ರಹಣ. ಇಂದು ರಾತ್ರಿ ಚಂದಿರನಿಗೆ ಗ್ರಹಣ ಹಿಡಿಯಲಿದ್ದು, ಸ್ವಚ್ಛ, ಬಿಳಿ ಬಣ್ಣದ ಚಂದಿರ ಬೂದು ಬಣ್ಣಕ್ಕೆ ತಿರುಗಲಿದ್ದಾನೆ.

ಗ್ರಹಣ.. 2019ರ ವರ್ಷಾಂತ್ಯದಲ್ಲಿ ಸೂರ್ಯಗ್ರಹಣವಾದ್ರೆ. 2020ರ ಆರಂಭದಲ್ಲೇ ಚಂದ್ರಗ್ರಹಣ. ಕೇವಲ 20 ದಿನಗಳ ಅಂತರದಲ್ಲಿ ನಭೋಮಂಡಲದ ಎರಡು ಪ್ರಖರ ಶಕ್ತಿಗಳು ಗ್ರಹಣಕ್ಕೀಡಾಗುತ್ತಿರೋದಕ್ಕೆ ಇಡೀ ಭೂಮಿ ಸಾಕ್ಷಿಯಾಗುತ್ತಿದೆ.
ಸೌರಮಂಡಲದ ವೈಚಿತ್ರ್ಯ ಸೂರ್ಯ, ಚಂದಿರನ ಹೊಸ ಅವತಾರ ಇಡೀ ಜಗತ್ತನ್ನೇ ಕೌತುಕ ಲೋಕದತ್ತ ತಳ್ಳಿದೆ. ಭಯ, ಭಕ್ತಿ, ಏನನ್ನೋ ತಿಳಿಯೋ ಆಸಕ್ತಿಗೆ ಕಾರಣವಾಗಿದೆ. ಅದಕ್ಕೆ ಕಾರಣ ಸೂರ್ಯಗ್ರಹಣದ ಬೆನ್ನಲ್ಲೇ ನಡೀತಿರೋ ಚಂದ್ರಗ್ರಹಣ.

ಇಂದು ರಾತ್ರಿ ತೋಳ ಚಂದ್ರಗ್ರಹಣ!
ಯೆಸ್.. ಇದು ಅಂತಿಂಥಾ ಗ್ರಹಣವಲ್ಲ. ಇಂದು ಬಾನಂಗಳದಲ್ಲಿ ನಡೆಯಲಿರೋದು ತೋಳ ಚಂದ್ರಗ್ರಹಣ. ಹೊಸ ವರ್ಷದ ಮೊದಲ ಹುಣ್ಣಿಮೆಯಂದು ನಡೀತಿರೋ ಈ ತೋಳ ಚಂದ್ರಗ್ರಹಣ ಈಗ ಮನುಕುಲವನ್ನ ಮತ್ತೆ ಆಕಾಶದತ್ತ ನೋಡುವಂತೆ ಮಾಡಿದೆ. ಬರೀ ಚಂದ್ರನನ್ನ ನೋಡೋದೆ ಅದೆಂಥದ್ದೋ ಆನಂದ, ಅದೆಂಥದ್ದೋ ನೆಮ್ಮದಿ. ಶುದ್ಧತೆಯ, ಬಿಳಿ ಬಣ್ಣದ ಪ್ರತೀಕ. ಮಕ್ಕಳು, ಕವಿಗಳು, ಪ್ರೇಮಿಗಳು, ವಿಜ್ಞಾನಿಗಳ ನೆಚ್ಚಿನ ಚಂದಿರ ಇಂದು ಬೂದು ಬಣ್ಣಕ್ಕೆ ತಿರುಗಲಿದ್ದಾನೆ.

ಹಾಗಿದ್ರೆ ಇಂದು ತೋಳಚಂದ್ರ ಗ್ರಹಣ ನಡೆಯೋದು ಹೇಗೆ? ಗ್ರಹಣ ಆರಂಭವಾಗೋದು ಎಷ್ಟು ಗಂಟೆಗೆ? ಚಂದಿರ ಬೂದು ಬಣ್ಣಕ್ಕೆ ತಿರುಗೋದು ಎಷ್ಟೊತ್ತಿಗೆ? ಚಂದ್ರಗ್ರಹಣ ಅಂತ್ಯಗೊಳ್ಳೋ ಸಮಯ ಯಾವುದು? ಇವೆಲ್ಲದ್ರ ಕುರಿತು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಚಂದ್ರಗ್ರಹಣ ನಡೆಯೋದು ಹೇಗೆ?
ಸೂರ್ಯ ಚಂದ್ರನ ನಡುವೆ ಭೂಮಿ ಅಡ್ಡ ಬರುತ್ತೆ. ಈ ವೇಳೆ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತೆ. ಹೀಗಾಗಿ ಚಂದ್ರ ಸಾಮಾನ್ಯಕ್ಕಿಂತ ತುಸು ದೊಡ್ಡದಾಗಿಯೇ ಗೋಚರಿಸುತ್ತೆ. ಇನ್ನು ಇಂದು ಗೋಚರವಾಗಲಿರೋದು ಅರೆ ನೆರಳಿನ ಚಂದ್ರಗ್ರಹಣವಾಗಿದೆ. ಅಂದರೆ ಭೂಮಿಯ ದಟ್ಟ ನೆರಳನ್ನು ಮುಟ್ಟದೆ ಚಂದ್ರ ಹೊರಬರುತ್ತೆ. ಈ ವೇಳೆ ಅರೆ ನೆರಳಿನ‌ ಚಂದ್ರ ಗ್ರಹಣ ಉಂಟಾಗುತ್ತೆ. ಚಂದ್ರನ ಮೇಲೆ ಬೆಳಕು ಬೀಳದಂತೆ ಭೂಮಿ ನಿರ್ಬಂಧಿಸುತ್ತೆ. ಈ ವೇಳೆ ಭೂಮಿಯ ನೆರಳು ಚಂದ್ರನ ಮೇಲೆ ಪ್ರತಿಫಲಿಸಿದಾಗ ಗ್ರಹಣ ಸಂಭವಿಸುತ್ತೆ. ಹಾಗಿದ್ರೆ ಈ ತೋಳ ಚಂದ್ರಗ್ರಹಣ ಹೇಗಿರುತ್ತೆ? ಯಾವ ಸಮಯದಲ್ಲಿ, ಎಲ್ಲೆಲ್ಲಿ ಗೋಚರವಾಗುತ್ತೆ ಅನ್ನೋದನ್ನ ನೋಡೋದಾದ್ರೆ..

ಎಷ್ಟು ಗಂಟೆಗೆ ಚಂದ್ರಗ್ರಹಣ?
ಇಂದು ರಾತ್ರಿ ತೋಳ ಚಂದ್ರಗ್ರಹಣ ಗೋಚರವಾಗಲಿದೆ. ರಾತ್ರಿ 10.30ಕ್ಕೆ ತೋಳಚಂದ್ರಗ್ರಹಣ ಆರಂಭ ವಾಗಲಿದ್ದು, ಮಧ್ಯರಾತ್ರಿ 2.35ಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ. ಇನ್ನು ರಾತ್ರಿ 12.40ಕ್ಕೆ ಗ್ರಹಣ ಮಧ್ಯಮ ಕಾಲವಾಗಿದೆ. ಹೀಗೆ ಒಟ್ಟು 4 ಗಂಟೆ 5 ನಿಮಿಷಗಳ ಕಾಲ ತೋಳ ಚಂದ್ರಗ್ರಹಣ ಗೋಚರವಾಗಲಿದೆ.

ಎಲ್ಲೆಲ್ಲಿ ಗ್ರಹಣ ಗೋಚರ?
ಭಾರತದ ಎಲ್ಲಾ ನಗರಗಳಲ್ಲೂ ಚಂದ್ರಗ್ರಹಣ ಕಾಣಿಸುತ್ತೆ. ಏಷ್ಯಾ ಹಾಗೂ ಆಫ್ರಿಕಾದಲ್ಲಿ ಈ ತೋಳ ಚಂದ್ರ ಗ್ರಹಣ ಗೋಚರವಾಗಲಿದೆ. ಇನ್ನು ಯುರೂಪ್ ಮತ್ತು ಆಸ್ಟ್ರೇಲಿಯಾದಲ್ಲೂ ಗ್ರಹಣ ಗೋಚರವಾಗಲಿದೆ. ಅಷ್ಟಕ್ಕೂ ಇಡೀ ಜಗತ್ತಿನ ಗಮನ ಸೆಳೆದಿರೋ, ವಿಸ್ಮಯಕಾರಿ ತೋಳ ಗ್ರಹಣ ಅಂದ್ರೇನು? ಇಂದು ಚಂದ್ರನಿಗೆ ಹಿಡಿಯೋ ಗ್ರಹಣವನ್ನ ತೋಳ ಗ್ರಹಣ ಅಂತಾ ಕರೆಯೋದ್ಯಾಕೆ ಅನ್ನೋದನ್ನ ನೀವು ತಿಳಿಯಲೇಬೇಕು.

ತೋಳ ಗ್ರಹಣ ಎಂದರೇನು?
ತೋಳ ಚಂದ್ರ ಗ್ರಹಣಕ್ಕೆ ಈ ಹೆಸರು ಬರಲು ಕಾರಣ ಇಂದು ಚಂದ್ರನ ಬಣ್ಣ ಬೂದು ಬಣ್ಣದಲ್ಲಿರುತ್ತೆ. ಜೊತೆಗೆ ವರ್ಷದ ಆರಂಭದ ತಿಂಗಳು ಅಂದರೆ ಜನವರಿ ತಿಂಗಳಲ್ಲೇ ಹೆಚ್ಚಾಗಿ ತೋಳಗಳು ಊಳಿಡುತ್ತವೆ. ಹಿಂದಿನ ಕಾಲದಲ್ಲಿ ಸೌರಮಾನ ಕ್ಯಾಲೆಂಡರ್ ಬದಲಿಗೆ ಚಂದ್ರಮಾನ ಕ್ಯಾಲೆಂಡರ್ ಫಾಲೋ ಮಾಡಲಾಗ್ತಿತ್ತು. ಹೀಗಾಗಿ ಜನವರಿ ತಿಂಗಳಲ್ಲಿ ಕಾಣಿಸಿಕೊಳ್ಳೋ ಪೂರ್ಣ ಚಂದ್ರನಿಗೆ ತೋಳ ಚಂದ್ರ ಅನ್ನುತ್ತಿದ್ದರು. ಇದನ್ನು ಹೆಚ್ಚಾಗಿ ಆಂಗ್ಲೋ-ಸ್ಯಾಕ್ಸನ್ ಸಂಸ್ಕೃತಿಯಲ್ಲಿ ಬಳಕೆ ಮಾಡ್ತಿದ್ರು. ಒಟ್ನಲ್ಲಿ, ಚಂದಿರನ ವಿಶಿಷ್ಟಾವತಾರಕ್ಕೆ, ಅತ್ಯಪರೂಪದ, ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಲು ಇಡೀ ಜಗತ್ತೇ ಸಜ್ಜಾಗಿದೆ.

Related Tags:

Related Posts :

Category:

error: Content is protected !!