ಊಟದ ಸಮಯ: ಕೊರೊನಾ ಸೋಂಕಿತ ಯಡಿಯೂರಪ್ಪ ಊಟ ಏನು ಗೊತ್ತಾ?

ಬೆಂಗಳೂರು: ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿಎಸ್​ ಯಡಿಯೂರಪ್ಪ ಬೆಳಗ್ಗೆ ಮನೆಯಿಂದಲೇ ಉಪಹಾರ ತರಿಸಿಕೊಂಡಿದ್ದರು. ಈಗ ಮಧ್ಯಾಹ್ನ ಊಟಕ್ಕೂ ವೈದ್ಯರ ಸಲಹೆಯಂತೆ ಬೇಕಾದ ರುಚಿಯಾದ ಊಟವನ್ನು ತರಿಸಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿದ್ದು, ಮನೆ ಊಟದ ಮೊರೆ ಹೋಗಿದ್ದಾರೆ. ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ, ಅನ್ನ, ಸಾಂಬಾರ್, ಎರಡು ರೀತಿಯ ಪಲ್ಯ ತರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿಯೇ ಊಟದ ವ್ಯವಸ್ಥೆ ಮಾಡ್ತೀವಿ ಎಂದು ವೈದ್ಯರು ಹೇಳಿದ್ರೂ, ಬೇಡ ಮನೆಯಿಂದಲೇ ತರಿಸಿಕೊಳ್ತೀನಿ ಅಂತ ಕಷಾಯ, ಹಣ್ಣು, ಊಟವನ್ನ ಮನೆಯಿಂದ ತರಿಸಿಕೊಂಡಿದ್ದಾರೆ.

Related Tags:

Related Posts :

Category: