ಸರಗಳ್ಳರನ್ನು ‘ಸ್ಕೆಚ್’ ಹಾಕಿ ಹಿಡಿದ ಮಾದನಾಯಕನಹಳ್ಳಿ ಪೊಲೀಸರು

ನೆಲಮಂಗಲ: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೈಯುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ರೇಖಾಚಿತ್ರ ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಮೂಲದ ಮಧು, ಸಿದ್ದರಾಜು ಬಂಧಿತ ಆರೋಪಿಗಳು.

ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ರು:
ಆರೋಪಿಗಳು ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಬೈಕ್​ನ ನಂಬರ್ ಪ್ಲೇಟ್ ಬದಲಿಸಿ ದರೋಡೆ ಮಾಡಿ, ಬೆಂಗಳೂರಿನ ಅಂದ್ರಹಳ್ಳಿಯ ಬಾಡಿಗೆ ಮನೆ ಸೇರಿಕೊಳ್ಳುತ್ತಿದ್ದರು. ದರೋಡೆ ಬಳಿಕ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆಯುತ್ತಿದ್ರು. ಮಾದನಾಯಕನಹಳ್ಳಿ, ಯಶವಂತಪುರ, ನೆಲಮಂಗಲ, ಕ್ಯಾತ್ಸಂದ್ರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದರು.

ಆರೋಪಿಗಳ ಪತ್ತೆಗೆ ಕೇಂದ್ರ ವಲಯ ಐಜಿಪಿ ಶರತ್‌ ಚಂದ್ರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಇನ್ಸ್​ಪೆಕ್ಟರ್​ ಸತ್ಯನಾರಾಯಣ್ ನೇತೃತ್ವದಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಮಾರಕಾಸ್ತ್ರಗಳು, ನಂಬರ್ ಪ್ಲೇಟ್ ಸೇರಿದಂತೆ ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!