ಇರ್ಫಾನ್ ಖಾನ್​ಗೆ ಇಗತ್ಪುರಿ ಗ್ರಾಮದ ಜನ ಕೊಟ್ಟ ಉಡುಗೊರೆ ಏನು? ಯಾಕೆ?

ಮುಂಬೈ: ಬಾಲಿವುಡ್​ನಲ್ಲಷ್ಟೇ ಅಲ್ಲದೆ ಹಾಲಿವುಡ್​ನಲ್ಲೂ ತನ್ನ ಛಾಪನ್ನು ಮೂಡಿಸಿದ್ದ ಅತ್ಯುತ್ತಮ ನಟ ದಿವಂಗತ ಇರ್ಫಾನ್ ಖಾನ್. ಇವರು ನಮ್ಮನ್ನು ಅಗಲಿ 13 ದಿನಗಳು ಕಳೆದಿವೆ. ರಾಷ್ಟ್ರವು ಅವರ ನಿಧನಕ್ಕೆ ಶೋಕಿಸುತ್ತಿರುವಾಗ, ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಇಗತ್ಪುರಿ ಗ್ರಾಮದ ಜನರು ದಿವಂಗತ ನಟನಿಗೆ ಸೂಕ್ತವಾದ ಗೌರವ ಸಲ್ಲಿಸಲು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ದಿವಂಗತ ಇರ್ಫಾನ್ ಖಾನ್ ತಮಗೆ ಮಾಡಿರುವ ಸಹಾಯ, ಎಲ್ಲ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡು ಇಗತ್ಪುರಿ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಅವರ ಹೆಸರಿಟ್ಟಿದ್ದಾರೆ. ನಟನ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.


ಇರ್ಫಾನ್‌ ಬದುಕಿದ್ದಾಗ ಈ ಗ್ರಾಮದ ಬಡ ಕುಟುಂಬದ ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ತಮ್ಮ ವೀಕೆಂಡ್‌ ಕಳೆಯಲು ಈ ಗ್ರಾಮದಲ್ಲಿ ಭೂಮಿ ಖರೀದಿಸಿದ್ದರು. ಬಿಡುವಾದಾಗಲೆಲ್ಲಾ ಅವರು ಅಲ್ಲಿಗೆ ಬಂದು ವಾಸ್ತವ್ಯ ಹೂಡುತ್ತಿದ್ದರು. ಆ ಸ್ಥಳವನ್ನು ಗ್ರಾಮಸ್ಥರು ಹೀರೋ-ಚಿ-ವಾಡಿ ಎಂದು ಮರುನಾಮಕರಣ ಮಾಡಿದ್ದಾರೆ. ಹೀರೋ-ಚಿ-ವಾಡಿ ಅಂದರೆ ನಾಯಕನ ಸ್ಥಳ ಎಂದರ್ಥ.

ಕೆಲ ವರದಿಯ ಪ್ರಕಾರ, ಇರ್ಫಾನ್ ಮೊದಲ ಬಾರಿಗೆ ಇಗತ್ಪುರಿಯ ಟ್ರಿಂಗಲ್‌ವಾಡಿ ಕೋಟೆಗೆ ಒಂದು ಜಮೀನನ್ನು ಖರೀದಿಸಲು ಆಗಮಿಸಿದ್ದರು. ಅಲ್ಲಿ ಸುತ್ತಮುತ್ತಾ ಕೆಲ ಆದಿವಾಸಿಗಳು ವಾಸವಾಗಿದ್ದರು. ಅಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳ ಕೊರತೆ ಇತ್ತು.

ಇಂತಹ ಪರಿಸ್ಥಿತಿಯನ್ನು ನೋಡಿದ ಇರ್ಫಾನ್ ಹಳ್ಳಿಯ ಅಭಿವೃದ್ಧಿಗೆ ಮುಂದಾದರು. ಮತ್ತು ಅಲ್ಲಿನ ಜನರ ಜೀವನವನ್ನು ಪರಿವರ್ತಿಸಲು ಸಹಾಯ ಮಾಡಿದರು. ಅಷ್ಟೇ ಅಲ್ಲದೆ ಗ್ರಾಮಸ್ಥರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು, ಅವರ ಹಬ್ಬಗಳಲ್ಲಿ ಭಾಗವಹಿಸುವುದು. ಮತ್ತು ಬುಡಕಟ್ಟು ಮಕ್ಕಳಿಗೆ ಪುಸ್ತಕಗಳು, ಸ್ವೆಟರ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಿದ್ದರು.

ಅವರು ಅನೇಕ ಕುಟುಂಬಗಳಿಗೆ ರಕ್ಷಕ ದೇವದೂತರಾಗಿದ್ದರು. ನಮಗೆ ಅಗತ್ಯವಿದ್ದಾಗಲೆಲ್ಲಾ ಇರ್ಫಾನ್‌ ನಮಗೆ ಸಹಾಯ ಮಾಡಿದ್ದಾರೆ. ನಮ್ಮ ಗ್ರಾಮಕ್ಕೆ ಶಾಲೆ ಮತ್ತು ಮಕ್ಕಳಿಗೆ ಪುಸ್ತಕ ಇತ್ಯಾದಿಗಳನ್ನು ನೀಡಿದ್ದಾರೆ ಎಂದು ಆ ಗ್ರಾಮಸ್ಥರು ನೆನಪಿಸಿಕೊಂಡಿದ್ದಾರೆ. ಒಮ್ಮೆ ಗ್ರಾಮಸ್ಥರು ಇರ್ಫಾನ್‌ ಬಳಿ ತಮಗೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಲು ಆ್ಯಂಬುಲೆನ್ಸ್‌ ಬೇಕೆಂದಾಗ ಇರ್ಫಾನ್‌ ಹಿಂದೆ ಮುಂದೆ ಯೋಚಿಸದೆ ತಮ್ಮಲ್ಲಿದ್ದ ಎರಡು ಆ್ಯಂಬುಲೆನ್ಸ್‌ಗಳ ಪೈಕಿ ಒಂದನ್ನು ಆ ಗ್ರಾಮಕ್ಕೆ ದಾನ ಮಾಡಿಬಿಟ್ಟರು ಎಂದು ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.

ಅಲ್ಲಿನ ಜನರಿಗೆ ಇರ್ಫಾನ್‌ ಮೇಲೆ ಎಷ್ಟು ಅಭಿಮಾನವಿದೆಯೆಂದರೆ ಆ ಗ್ರಾಮದಲ್ಲಿ ಥಿಯೇಟರ್‌ ಇಲ್ಲದಿದ್ದರು. ಇರ್ಫಾನ್ ಅವರ ಯಾವುದೇ ಸಿನಿಮಾ ಬಂದರೂ ಆ ಊರಿನಿಂದ 30 ಕಿ.ಮೀ ದೂರದ ಪಟ್ಟಣದಲ್ಲಿರುವ ಥಿಯೇಟರ್‌ಗೆ ಹೋಗಿ ನೋಡುತ್ತಿದ್ದರು. ಮಕ್ಕಳು, ಕುಟುಂಬಸ್ಥರು ಇರ್ಫಾನ್ ನಟನೆಯ ಯಾವೊಂದು ಚಿತ್ರವನ್ನೂ ಮಿಸ್ ಮಾಡ್ತಿರಲಿಲ್ಲ.

Related Posts :

Category:

error: Content is protected !!