ಮಲೈಕಾ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಬೃಹತ್​ ವಂಚನೆ: ಸಂಸ್ಥೆಯ ಶಾಖೆಗಳು ಬಂದ್

  • pruthvi Shankar
  • Published On - 11:13 AM, 22 Nov 2020

ಮಂಗಳೂರು: ಮಲೈಕಾ ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಯ ಮೇಲೆ ಒಟ್ಟು 350 ಕೋಟಿಗೂ ಹೆಚ್ಚು ವಂಚನೆ ಆರೋಪ ಕೇಳಿಬಂದಿದೆ.

ತಿಂಗಳ ಇಂಟ್ರೆಸ್ಟ್ ಸ್ಕೀಂನಲ್ಲಿ ಹಣ ಇಟ್ಟ ಹಲವರಿಗೆ ಮಲೈಕಾ ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಯಿಂದ ವಂಚನೆ ಆರೋಪ ಮಾಡಲಾಗಿದೆ. ಮಂಗಳೂರು ಶಾಖೆಯೊಂದರಲ್ಲೇ ಸುಮಾರು 40 ಕೋಟಿಗೂ ಅಧಿಕ ಹಣ ಪಂಗನಾಮ‍ ಹಾಕಿದ್ದಾರೆ ಎಂದು ಫಿಕ್ಸ್ ಡೆಪಾಸಿಟ್ ಇಟ್ಟಿರುವ 800ಕ್ಕೂ ಅಧಿಕ ಜನ ಆರೋಪ ಮಾಡುತ್ತಿದ್ದಾರೆ.

ಮಂಗಳೂರು,ಮುಂಬಯಿನಲ್ಲಿ ಶಾಖೆಗಳನ್ನು ಹೊಂದಿರುವ ಮಲೈಕಾ ಸಂಸ್ಥೆ ಫಿಕ್ಸ್ ಡೆಫಾಸಿಟ್ ಹಣ ವಾಪಸು ನೀಡದೆ ವಂಚಿಸಿರುವ ಆರೋಪ ಮಾಡಿದ್ದಾರೆ. ಸದ್ಯ ಸಂಸ್ಥೆ ಶಾಖೆಗಳನ್ನು ಬಂದ್ ಮಾಡಿ ದೋಖಾ ಮಾಡಿದ್ದಾರೆ. ಅಲ್ಲದೆ ಮಂಗಳೂರಿನ ಬೆಂದೂರ್ ವೆಲ್​ನಲ್ಲಿರುವ ಸೊಸೈಟಿಯ ಪ್ರಧಾನ ಕಚೇರಿಯು ಸಹ ಬಂದ್ ಆಗಿದೆ. ಒಟ್ಟು 350 ಕೋಟಿಗೂ ಹೆಚ್ಚು ವಂಚನೆ ಆಗಿದೆ ಎಂದು ಜನ ಆರೋಪ ಮಾಡುತ್ತಿದ್ದಾರೆ.

ವಂಚನೆಗೊಳಗಾದವರು ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ದ ದೂರು ದಾಖಲಾಗಿದೆ. ಸದ್ಯ ಮಂಗಳೂರು ಬ್ರ್ಯಾಂಚ್ ಮ್ಯಾನೇಜರ್ ರೀನಾ ಜೋಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರೀನಾ ಜೋಶ್​ಳನ್ನು ಬಂಧಿಸಿರುವ ಪೊಲೀಸರು ಬೆಂದೂರ್ ವೆಲ್​ನ ಪ್ರಧಾನ ಕಚೇರಿಯಲ್ಲಿ ಸ್ಥಳ ಮಹಜರುಗೆ ಕರೆತಂದು ಸಂಸ್ಥೆಗೆ ಸಂಬಂಧಪಟ್ಟಂತ ದಾಖಲೆಗಳನ್ನು ಎನ್.ಸಿ.ಇ.ಪಿ.ಎಸ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.