ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ & ಉಡುಪಿ ನಗರಸಭೆ.. ಏನ್ಮಾಡ್ತಿದೆ?

ಉಡುಪಿ ಜಿಲ್ಲೆ ಪ್ರವಾಸಿಗರ ಸ್ವರ್ಗ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ರಾಜ್ಯದಿಂದ ಸಾವಿರಾರು ಪ್ರವಾಸಿಗರು ಉಡುಪಿ ಕಡೆ ಆಗಮಿಸುತ್ತಾರೆ. ಆದರೆ ಇಂತಹ ಪ್ರೇಕ್ಷಣಾ ಸ್ಥಳದ ಪರಿಸ್ಥಿತಿ ಅಧೋಗತಿ ಇದೆ. ಉಡುಪಿ ಜಿಲ್ಲೆಯ ಆಹಾರ ಪದ್ಧತಿ ಉಡುಗೆ-ತೊಡುಗೆಗಳು ವಿಶಿಷ್ಟ ವಿಭಿನ್ನವಾಗಿದೆ.

ಉಡುಪಿ ಪ್ರವಾಸಿಗರ ಸ್ವರ್ಗ ಇಲ್ಲಿ ಹೊರರಾಷ್ಟ್ರದಿಂದ ಮತ್ತು ಹೊರರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅದರಲ್ಲಿ ಮುಖ್ಯವಾಗಿ ಉಡುಪಿ ಮಲ್ಪೆ ಬೀಚ್. ಉಡುಪಿಗೆ ಆಗಮಿಸಿದ ಪ್ರವಾಸಿಗರು ಈ ಬೀಚ್ ನೋಡದೆ ಹಿಂದಿರುಗುವುದಿಲ್ಲ. ವೀಕೆಂಡ್ ಬಂದ್ರೆ ಸಾಕು ಸ್ಥಳೀಯ ಜನರು ಬೀಚ್ ಕಡೆ ಮುಖ ಮಾಡುತ್ತಾರೆ..

ಬೋಟಿಂಗ್,ಒಂಟೆ ಸವಾರಿ, ಕುದುರೆ ಸವಾರಿ, ಮಕ್ಕಳು ಮಣ್ಣಿನಲ್ಲಿ ಆಟವಾಡಲು ವಿಶಾಲವಾದ ಸ್ಥಳಾವಕಾಶ ಇದೆ. ಕೊರೊನಾ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಬೀಚಿಗೆ ಪ್ರವಾಸಿಗರು ಆಗಮಿಸುತ್ತಿಲ್ಲ. ಬೀಚ್ ಪರಿಸರದಲ್ಲಿರುವ ಅಂಗಡಿಗಳು ಎರಡು ತಿಂಗಳಿನಿಂದ ತೆರೆಯದೆ ಬಿಕೋ ಎನ್ನುತ್ತಿದೆ. ಉಡುಪಿಯ ಮಲ್ಪೆ ಬೀಚ್ ಅಂಗಡಿಗಳು ತೆರೆಯದೆ ಎರಡು ತಿಂಗಳು ಕಳೆದಿವೆ. ಇದರಿಂದ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ ಅಂಗಡಿ ಮಾಲೀಕರು..

ಅಂಗಡಿಗಳು ಕುಡುಕರ ತಾಣವಾಗಿವೆ
ಈ ಅಂಗಡಿಗಳು ಕುಡುಕರ ತಾಣವಾಗಿ ಪರಿವರ್ತನೆಗೊಂಡಿದೆ. ಹೌದು ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ನಷ್ಟ ಅನುಭವಿಸಿದರೂ ಅಂಗಡಿ ಮಾಲೀಕರು ಸರ್ಕಾರದ ನಿಯಮಗಳನ್ನು ಪಾಲಿಸಿ ಮನೆಯಲ್ಲಿ ಕೂತ್ಕೊಂಡಿದ್ದಾರೆ. ಆದರೆ ಇದರ ಲಾಭವನ್ನು ಸ್ಥಳೀಯ ಕುಡುಕರು ಪಡೆದುಕೊಂಡಿದ್ದಾರೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಬಾರ್ ನಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುವುದು ನಿಷೇಧವಾಗಿದೆ. ಮದ್ಯಪ್ರಿಯರಿಗೆ ಕೇವಲ ವೈನ್ ಶಾಪ್ ಗಳಲ್ಲಿ ಮದ್ಯ ಸಿಗುತ್ತಿದ್ದು ಪಾರ್ಸೆಲ್ ಗಳನ್ನು ಪಡೆದುಕೊಂಡು ಬೀಚ್ ಬಳಿ ಅಂಗಡಿಗಳಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಮದ್ಯ ಸೇವನೆ ಬಾಟಲುಗಳು ಮತ್ತು ಪ್ಯಾಕೆಟ್ ಗಳನ್ನು ಅಲ್ಲೇ ಬಿಸಾಡಿ ಹೋಗುತ್ತಿದ್ದಾರೆ.

ಉಡುಪಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ, ಉಡುಪಿ ನಗರಸಭೆ ಏನ್ಮಾಡ್ತಿದೆ?
ಉಡುಪಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಮತ್ತು ಉಡುಪಿ ನಗರಸಭೆ ಇತ್ತ ಗಮನಹರಿಸಬೇಕಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಸ್ಥಳೀಯ ಜನರು ಬೀಚ್ ಗೆ ಆಗಮಿಸಲು ಅವಕಾಶ ಇಲ್ಲ. ಇದರ ಲಾಭವನ್ನು ಕುಡುಕರು ಪಡೆದುಕೊಳ್ಳುತ್ತಿದ್ದಾರೆ. ಬೀಚ್ ಬಳಿ ಇರುವ ಅಂಗಡಿಗಳ ಟೇಬಲ್ ಕುರ್ಚಿಗಳನ್ನು ಉಪಯೋಗಿಸಿ ಬೆಳಿಗ್ಗೆ ಮತ್ತು ರಾತ್ರಿ ಹೊತ್ತು ಮದ್ಯ ಸೇವನೆ ಮಾಡುತ್ತಿದ್ದಾರೆ.

ಸ್ವಚ್ಛ ಉಡುಪಿ -ಸುಂದರ ಉಡುಪಿ ಎಂದು ಜಾಹೀರಾತು ನೀಡುವ ಜಿಲ್ಲಾಡಳಿತ ಇತ್ತ ಗಮನಹರಿಸಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ. ಉಡುಪಿ ಬೀಚ್ ಅಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ನಗರಾಡಳಿತ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more