ದೆಹಲಿ ದಳ್ಳುರಿ: ಪೇದೆ ಮೇಲೆ ಗುಂಡು ಹಾರಿಸಿದ್ದ ಪುಂಡ ಅರೆಸ್ಟ್

ದೆಹಲಿ: ಪೌರತ್ವದ ಕಿಚ್ಚಿಗೆ ದೆಹಲಿ ಧಗ ಧಗಿಸಿಬಿಟ್ತು. ಅಮಾಯಕರಾಗಿದ್ದ 47 ಮಂದಿಯನ್ನ ಹಿಂಸಾಚಾರ ಬಲಿ ಪಡೆದುಬಿಡ್ತು. ಸದ್ಯ ದೆಹಲಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ಮಧ್ಯೆ ಹಿಂಸಾಚಾರದ ವೇಳೆ ಗುಂಡುಹಾರಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಖಾಕಿ ಬಲೆಗೆ ಬಿದ್ದಾನೆ!

ಶಾಂತವಾಗಿದ್ದ ದೆಹಲಿಯನ್ನು ದುಷ್ಕರ್ಮಿಗಳು ದಂಗೆಬ್ಬಿಸಿಬಿಟ್ರು. ಸಿಎಎ ಹೋರಾಟದ ಹೆಸ್ರಲ್ಲಿ ಕಿಚ್ಚು ಹಚ್ಚಿಬಿಟ್ರು. ಜನರ ಪ್ರಾಣವನ್ನೂ ಲೆಕ್ಕಿಸದೇ ಹಿಂಸಾಚಾರ ನಡೆಸಿ ವಿಕೃತಿ ಮೆರೆದು ಬಿಟ್ರು. ಸಾರ್ವಜನಿಕ ಆಸ್ತಿಪಾಸ್ತಿ ಎಲ್ಲವನ್ನೂ ಹಾಳುಗೆಡವಿದ್ರು. ಇಷ್ಟೆಲ್ಲಾ ಮಾಡಿದ ದುಷ್ಕರ್ಮಿಗಳಿಗೆ ಈಗ ನಡುಕ ಶುರುವಾಗಿದೆ. ಯಾಕಂದ್ರೆ, ದೆಹಲಿ ಪೊಲೀಸ್ರು ಹಿಂಸಾಚಾರ ನಡೆಸಿದವರನ್ನು ಹುಡುಕಿ ಹುಡುಕಿ ಬಂಧಿಸುತ್ತಿದ್ದಾರೆ.

ಹಿಂಸಾಚಾರ ನಡೆಸಿದವರ ಜನ್ಮ ಜಾಲಾಡುತ್ತಿದೆ ಖಾಕಿ!
ಈಶಾನ್ಯ ದೆಹಲಿಯಲ್ಲಿ ಹಿಂದೆಂದೂ ಕಂಡೂ ಕೇಳರಿಯದ ಹಿಂಸಾಚಾರ ನಡೆದು ಬಿಡ್ತು. ಆ ಹಿಂಸಾಚಾರಕ್ಕೆ 47 ಮಂದಿ ಪ್ರಾಣ ಬಿಟ್ಟಿದ್ದು, ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ 200ಕ್ಕೂ ಹೆಚ್ಚು ಜನ ಗಾಯದಿಂದ ನರಳುತ್ತಿದ್ದಾರೆ. ಸಾವಿರಾರು ಜನ ಸರ್ವಸ್ವವನ್ನೂ ಕಳೆದುಕೊಂಡಿದ್ದು, ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಖಾಕಿ, ಈಗ ಹಿಂಸಾಚಾರ ನಡೆಸಿದವರ ಬೆನ್ನು ಬಿದ್ದಿದೆ. ಅವರ ಇಂಚಿಂಚೂ ಜನ್ಮ ಜಾಲಾಡುತ್ತಿದೆ.

‘ಗಲಭೆ’ಯ ಬೆನ್ನುಬಿದ್ದ ಖಾಕಿ:
ದೆಹಲಿಯ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇದುವರೆಗೂ 1,300 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿವಿಧ ಠಾಣೆಗಳಲ್ಲಿ ಒಟ್ಟು 369 ಎಫ್​ಐಆರ್ ದಾಖಲಾಗಿದೆ. ಈಶಾನ್ಯ ದೆಹಲಿಯ ಜಫ್ರಾಬಾದ್, ಚಾಂದ್ ಬಾಗ್, ಶಿವ ವಿಹಾರ್ ಹಾಗೂ ಯಮುನಾ ವಿಹಾರ್​ನಲ್ಲಿ ಇನ್ನೂ ಪ್ರತಿಭಟನೆಯ ಬಿಸಿ ತಣ್ಣಗಾಗಿಲ್ಲ. ಹೀಗಾಗಿ, ಭದ್ರತೆಗಾಗಿ ಸಿಆರ್​ಪಿಎಫ್ ಹಾಗೂ ಸಿಐಎಸ್ಎಫ್ ತುಗಡಿ ನಿಯೋಜಿಸಿ ಹದ್ದಿನ ಕಣ್ಣಿಡಲಾಗಿದೆ.

ಪೇದೆ ಮೇಲೆ ಗುಂಡು ಹಾರಿಸಿದ್ದ ಪುಂಡ ಅರೆಸ್ಟ್:
ದೆಹಲಿಯ ಮೌಜ್​ಪುರದಲ್ಲಿ ಪ್ರತಿಭಟನೆ ವೇಳೆ ಪೊಲೀಸ್ ಪೇದೆ ದೀಪ್ ದಹಿಯಾ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದ.. ಫೆಬ್ರವರಿ 24ರಂದು ನಡೆದ ಹಿಂಸಾಚಾರದ ವೇಳೆ ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದ ಈತ, ಗುಂಡು ಹಾರಿಸಿ ದೇಶಾದ್ಯಂತ ಸುದ್ದಿಯಾಗಿದ್ದ.

ಈತನ ಪತ್ತೆಗಾಗಿ ವಿಶೇಷ ಘಟಕವನ್ನು ರಚಿಸಲಾಗಿತ್ತು. ದೆಹಲಿ, ಪಂಜಾಬ್​, ಉತ್ತರ ಪ್ರದೇಶದ ಪೊಲೀಸರ ತಂಡ ಹಗಲು ರಾತ್ರಿ ಈತನಿಗಾಗಿ ಹುಡುಕಾಟ ನಡೆಸಿದ್ರು. ಆದ್ರೀಗ ದೆಹಲಿ ಕ್ರೈಂ ಬ್ರಾಂಚ್ ನ ವಿಶೇಷ ತಂಡ, ಉತ್ತರಪ್ರದೇಶದ ಬರೇಲಿಯಲ್ಲಿ ಬಂಧಿಸಿದ್ದಾರೆ.

ಸದ್ಯ ಶಾರುಖ್ ಮನೆ ಉಸ್ಮಾನ್ ಪುರದ ಅರವಿಂದ ನಗರದ ಸ್ಟ್ರೀಟ್ ನಂಬರ್ 5U-108ನಲ್ಲಿದ್ದು, ಸದ್ಯ ಬೀಗ ಜಡಿದಿದೆ. ಶಾರುಖ್ ಡ್ರಗ್ ಮಾಫಿಯಾಕ್ಕೋಸ್ಕರ ಕೆಲಸ ಮಾಡುತ್ತಿದ್ದಾನೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಈ ಬಗ್ಗೆ ಪೊಲೀಸ್ರಿ ತನಿಖೆ ನಡೆಸ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!