ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು.

ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು!
ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು ವಾವ್​ ಟೇಸ್ಟಿ ಟೇಸ್ಟಿ ಅನ್ನೋಕೆ ಹೊರಟಿದ್ರು. ಅಷ್ಟರಲ್ಲೇ ಬಾಯಲ್ಲಿ ರಬ್ಬರಿನಂಥ ಪದಾರ್ಥ ಸಿಕ್ಕಿದಂತೆ ಭಾಸವಾಯ್ತು. ಸಾಂಬಾರ್​ನಲ್ಲಿರೋ ಪದಾರ್ಥ ಇರಬೇಕು ಅಂತಾ ಬಾಯಿಂದ ಹೊರ ತೆಗೆದಾಗಲೇ ಗೊತ್ತಾಗಿದ್ದು, ಅದು ಸತ್ತ ಹಲ್ಲಿಯೆಂದು.

ಅಂದು ಕ್ಷಣ ದಂಗಾದ ಪಂಕಜ್​ಗೆ ಏನು ಮಾಡೋದು ಎಂದು ತೋಚಲೇ ಇಲ್ಲ. ಆಗಲೇ ಆತನಿಗೆ ಹೊಳೆದಿದ್ದು ಅದು ಬರಿ ಹಲ್ಲಿಯ ಅರ್ಧ ಕಳೆಬರ ಅಂತಾ! ಉಳಿದಿದ್ದು ಎಲ್ಲಿ ಅಂತಾ ಹುಡುಕಾಡಿದ, ಬಟ್​ ಸಿಗಲಿಲ್ಲ. ಕೂಡಲೇ, ಹೋಟೆಲ್​ ಸಿಬ್ಬಂದಿಯ ಮೇಲೆ ಕೂಗಾಡಿದ ಪಂಕಜ್​, ಘಟನೆಯ ವಿಡಿಯೋ ಸಹ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಹೋಟೆಲ್​ನ ಸಿಸಿಟಿವಿ ವಿಡಿಯೋ ಹಾಗೂ ಅಡುಗೆ ಭಟ್ಟನ ವಿವರ ಸಹ ಪಡೆದಿದ್ದಾರೆ.

Related Tags:

Related Posts :

Category: