ಬಾಮೈದನನ ಪತ್ನಿಯ ಹತ್ಯೆ: ಆರೋಪಿ ಬಾವ ಆಸ್ಪತ್ರೆಯಲ್ಲಿ ಸಾವು

  • KUSHAL V
  • Published On - 15:54 PM, 19 Nov 2020

ಬೆಂಗಳೂರು: ಬಾಮೈದನನ ಪತ್ನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ಬಾವ ವಿಜಯ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ನವೆಂಬರ್ 15ರಂದು ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ವಿಜಯ್ ಕುಮಾರ್ ಸಾವನ್ನಪ್ಪಿದ್ದಾನೆ. ಆರೋಪಿ ತನ್ನ ಬಾಮೈದನ ವಾಸುದೇವನ್​ರ ಪತ್ನಿಯಾದ ಲಾವಣ್ಯ (32) ಕತ್ತು‌ ಕೊಯ್ದು ಕೊಲೆಗೈದಿದ್ದ.

ಏನಿದು ಪ್ರಕರಣ?
ಆರೋಪಿ ವಿಜಯ್ ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಜೊತೆಗೆ, ಆರೋಪಿ ವಿರುದ್ಧ ಆತನ ಪತ್ನಿ ಬಸವನಗುಡಿ ಮಹಿಳಾ ಠಾಣೆಗೆ ದೂರು ಸಹ ನೀಡಿದ್ದಳು. ಹಾಗಾಗಿ, ತನ್ನ ಸಂಸಾರದ ಸಮಸ್ಯೆಯನ್ನು ಸರಿಪಡಿಸುವಂತೆ ವಿಜಯ್ ಕುಮಾರ್, ತನ್ನ ಬಾಮೈದನ ವಾಸುದೇವನ್ ಹಾಗೂ ಲಾವಣ್ಯಳ ಮೊರೆ ಹೋಗಿದ್ದ. ಈ ವೇಳೆ, ವಾಸುದೇವನ್ ಪತ್ನಿ ಲಾವಣ್ಯಳನ್ನ ಹತ್ಯೆಗೈದಿದ್ದ. ಬಳಿಕ ತಾನೂ ಸಹ ಚಾಕುವಿನಿಂದ ಚುಚ್ಚಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ.

ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ಕತ್ತು ಕೊಯ್ದು ಮಹಿಳೆ ಬರ್ಬರ ಕೊಲೆ..