ಮಲೆನಾಡಲ್ಲಿ ನೀರಿಗಾಗಿ ದಾಯಾದಿಗಳ ಕಿರಿಕ್: ಕತ್ತಲಲ್ಲಿ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ!

ಶಿವಮೊಗ್ಗ: ಪದೇ ಪದೆ ಆ ಅಣ್ಣ ತಮ್ಮನ ಕುಟುಂಬದ ನಡುವೆ ಜಮೀನಿನ ವಿಚಾರಕ್ಕೆ ಕಿರಿಕ್ ಆಗುತ್ತಿತ್ತು. ಗ್ರಾಮಸ್ಥರು ಕೂಡ ಸಮಾಧಾನ ಮಾಡುತ್ತಿದ್ರು. ಆದ್ರೆ ಮೊನ್ನೆ ತೋಟದಲ್ಲೇ ಆ ಜಗಳ ಅತಿರೇಕಕ್ಕೆ ಹೋಗಿತ್ತು. ನೋಡ ನೋಡುತ್ತಿದ್ದಂತೆ ರಕ್ತದೋಕುಳಿಯೇ ಹರಿದಿತ್ತು.

ಹಚ್ಚ ಹಸಿರಿನ ತೋಟದಲ್ಲಿ ನೆತ್ತರು ಹರಿದಿದ್ರೆ, ನಿಂತಿಲ್ಲೇ ನಿಂತಿರುವ ಬೈಕ್‌. ರಕ್ಕ ಸಿಕ್ಕ ಬಟ್ಟೆ ರಾಶಿಯಲ್ಲಿ ಒರ್ವ ಹೆಣೆವಾಗಿ ಮಲಗಿದ್ರೆ, ಗುದ್ದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಕುಟುಂಬಸ್ಥರು. ಹೆಣದ ಮುಂದೆ ಕುಂಟುಂಬಸ್ಥರು ಕಣ್ಣೀರ ಕೊಡಿ ಹರಿಯುತ್ತಿದ್ರೆ, ಪರಿಶೀಲಿಸುತ್ತಿರುವ ಖಾಕಿ ಪಡೆ.

ನೀರಿಗಾಗಿ ತೋಟದಲ್ಲೇ ಹರಿಯಿತು ನೆತ್ತರು..!
ಯೆಸ್‌, ಶಿವಮೊಗ್ಗ ತಾಲೂಕಿನ ಭದ್ರಾಪುರದ ಗ್ರಾಮ ನಿಜಕ್ಕೂ ಬೆಚ್ಚಿ ಬಿದ್ದಿತ್ತು. ಏನ್ ಆಯ್ತು ಅನ್ನುವಷ್ಟರಲ್ಲಿ ಗ್ರಾಮದಲ್ಲಿ ರಕ್ತ ನೀರಿನಂತೆ ಹರಿದಿತ್ತು. ಅಂದಹಾಗೇ ಈ ಗ್ರಾಮದ ಕರಿಯಪ್ಪ ಮತ್ತು ಬಡ್ಡಿ ಪರಮೇಶ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು. ಸಂಬಂಧದಲ್ಲಿ ಕರಿಯಪ್ಪ ಬಡ್ಡಿ ಪರಮೇಶ್ವರನಿಗೆ ಅಣ್ಣ ಆಗಬೇಕು. ದಯಾದಿಗಳಾಗಿದ್ದರು, ಎರಡು ಕುಟುಂಬಗಳ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆಗಳು ನಡೆಯುತ್ತಿತ್ತು. ಕಳೆದ 10 ವರ್ಷಗಳಿಂದ ಹಲವಾರು ಬಾರಿ ಗ್ರಾಮದ ಪ್ರಮುಖರೇ ರಾಜಿ ಪಂಚಾಯತಿ ಮಾಡಿ, ಬುದ್ಧಿವಾದ ಹೇಳಿ ಕಳುಹಿಸಿದ್ದರು. ಅದರೆ ಮೊನ್ನೆ ರಾತ್ರಿ ಕರಿಯಪ್ಪನನ್ನು ಪರಮೇಶ್ವರ ಕೊಚ್ಚಿ ಕೊಲೆ ಮಾಡಿದ್ದಾನೆ.

ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು:
ಇನ್ನು ಕರಿಯಪ್ಪನ ಜಮೀನಿಗೆ ನೀರು ಬರುವುದಕ್ಕೆ ಪರಮೇಶ ಅಡ್ಡಿ ಪಡಿಸುತ್ತಿದ್ದನಂತೆ. ಹೀಗಾಗಿ ಕರಿಯಪ್ಪ ಮತ್ತು ಬಡ್ಡಿ ಪರಮೇಶ್ವರನ ಕುಟುಂಬಗಳ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಿದ್ದವು. ಹಲವಾರು ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು. ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯತಿ ಮಾಡಿಕೊಂಡು, ಸುಮ್ಮನಿದ್ದರು.

ಅದರೆ ಮೊನ್ನೆ ಮತ್ತೆ ಕರಿಯಪ್ಪನ ಮಗ ನಾಗರಾಜ ಗದ್ದೆಗೆ ನೀರು ಹಾಯಿಸಲು ಹೋದ ಸಮಯದಲ್ಲಿ ಬಡ್ಡಿ ಪರಮೇಶ್ವರ ಅದಕ್ಕೆ ಅಡ್ಡಿ ಪಡಿಸಿದ್ದನಂತೆ. ನಂತ್ರ ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಬಡ್ಡಿ ಪರಮೇಶ್ವರ ಮತ್ತು ಅತನ ಸಹೋದರರು ಸೇರಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಕರಿಯಪ್ಪ ಅಲ್ಲಿಗೆ ಹೋದ ಸಮಯದಲ್ಲಿ ಕಬ್ಬಿಣದ ರಾಡು, ದೊಣ್ಣೆಗಳಿಂದ ಕರಿಯಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕರಿಯಪ್ಪ ಜೀವ ಬಿಟ್ಟಿದ್ದಾನೆ.

ಘಟನೆ ಬಳಿಕ ಆರೋಪಿಗಳು ಪರಾರಿ:
ಇನ್ನು ಬಡ್ಡಿ ಪರಮೇಶ್ವರ್, ಜಗದೀಶ್, ರಮೇಶ್ , ಮಂಜಪ್ಪ ಸೇರಿದಂತೆ ಒಟ್ಟು 10 ಜನ ಕರಿಯಪ್ಪನ ಕುಟುಂಬದವರ ಮೇಲೆ ಮಚ್ಚು ರಾಡುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕರಿಯಪ್ಪನ ಕುಟುಂಬ 5 ಜನರಿಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಪರಮೇಶ, ಜಗದೀಶ್, ರಮೇಶ್ ಮಂಜಪ್ಪ ಸೇರಿದಂತೆ 10 ಜನರು ಪರಾರಿಯಾಗಿದ್ದಾರೆ. ದಾಯಾದಿಗಳ ಗಲಾಟೆ ಕೊನೆಗೂ ಒಂದು ಜೀವವನ್ನು ಬಲಿ ಪಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Related Posts :

Category:

error: Content is protected !!