ಮಹಾರಾಷ್ಟ್ರ: ಕೊವಿಡ್ ಕೇರ್ ಸೆಂಟರ್​ನಿಂದ ನಾಪತ್ತೆಯಾದವ ಶವವಾಗಿ ಪತ್ತೆಯಾದ

ಕೊವಿಡ್ ಸೋಂಕಿತ ವ್ಯಕ್ತಿಯೊಬ್ಬ ಸೋಮವಾರ ಬೆಳಗ್ಗೆ ಕೋವಿಡ್ ಕೇರ್ ಸೆಂಟರ್​ನಿಂದ ತಪ್ಪಿಸಿಕೊಂಡು ಅದೇ ದಿನ ಶವವಾಗಿ ಪತ್ತೆಯಾಗಿರುವ ಘಟನೆ, ಉತ್ತರ ಮಹಾರಾಷ್ಟ್ರದ ಅಮಲ್ನೇರ್ ತೆಹ್ಸಿಲ್ ವ್ಯಾಪ್ತಿಯಲ್ಲಿ ಬರುವ ವರ್ವಡೆ ಗ್ರಾಮದಲ್ಲಿ ಜರುಗಿದೆ.

ಅಧಿಕಾರಿಯೊಬ್ಬರ ಪ್ರಕಾರ, ಸೋಮವಾರ ಕೊವಿಡ್ ಸೆಂಟರ್​ನಲ್ಲಿ ಜಾಸ್ತಿ ಸೋಂಕಿತರಿದ್ದ ಕಾರಣ ಮೃತವ್ಯಕ್ತಿ ನಾಪತ್ತೆಯಾಗಿದ್ದು ವೈದ್ಯರ ಗಮನಕ್ಕೆ ತಡವಾಗಿ ಬಂದಿದೆ. ಅವನಿಗೆ ಸೋಂಕು ತಗುಲಿದ್ದು ರವಿವಾರ ಲಭ್ಯವಾದ ರಿಪೋರ್ಟ್ ಮೂಲಕ ಗೊತ್ತಾಗಿತ್ತು. ಅವನ ದೇಹ, ಆಮಲ್ನೇರ್ ಪುರಸಭೆ ಕಟ್ಟಡದ ಬಳಿ ಸಿಕ್ಕಿತೆಂದು ಅಧಿಕಾರಿ ಹೇಳಿದರು.

ಸದರಿ ಸೆಂಟರ್ ಕೇವಲ 20 ಬೆಡ್​ಗಳ ಸಾಮರ್ಥ್ಯವುಳ್ಳದ್ದಾದರೂ 40 ಸೋಂಕಿತರನ್ನು ದಾಖಲಿಸಿಕೊಳ್ಳಲಾಗಿತ್ತು. ಮೃತವ್ಯಕ್ತಿ ಕಾಣೆಯಾದ ಕೂಡಲೇ ಪೊಲೀಸ್​ ದೂರು ನೀಡಲಾಗಿತ್ತು,” ಎಂದು ಪರಿಚಯ ಹೇಳಿಕೊಳ್ಳಲಿಚ್ಛಸದ ಅಧಿಕಾರಿ ಹೇಳಿದರು.

ಆದರೆ, ಸ್ಥಳೀಯ ಬಿಜೆಪಿ ನಾಯಕರೊಬ್ಬರ ಪ್ರಕಾರ, ಇಂಥ ಘಟನೆಗಳು ಆಮಲ್ನೇರ್​ಗೆ ಹೊಸದೇನಲ್ಲ. ಇತ್ತೀಚೆಗಷ್ಟೇಆಮಲ್ನೇರ್ ಗ್ರಾಮೀಣ ಆರೋಗ್ಯ ಕೇಂದ್ರದಿಂದ ಓಡಿಹೋದ ಕೊವಿಡ್-19 ರೋಗಿಯೊಬ್ಬ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದ. ಈ ನಾಯಕ ಹೇಳುವ ಪ್ರಕಾರ, ಕೊವಿಡ್ ಸೆಂಟರ್ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಬೇಕು, ಹಾಗಾದಲ್ಲಿ ಮಾತ್ರ ಇಂಥ ದುರ್ಘಟನೆಗಳು ಮರುಕಳಿಸುವುದು ತಪ್ಪುತ್ತದೆ.

Related Tags:

Related Posts :

Category: