ಹಳೇ ಜಿದ್ದಿಗೆ ಶುರುವಾದ ಗುಂಪು ಘರ್ಷಣೆ ಕೊಲೆಯಲ್ಲಿ ಅಂತ್ಯ, ಎಲ್ಲಿ?

ಮೈಸೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಶುರುವಾದ ಗುಂಪು ಘರ್ಷಣೆಯಲ್ಲಿ ವ್ಯಕ್ತಿಯೊಬ್ಬನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಾಡ್ರಹಳ್ಳಿಯಲ್ಲಿ ನಡೆದಿದೆ. 44 ವರ್ಷದ ಮಹದೇವ ಬರ್ಬರವಾಗಿ ಹತ್ಯೆಯಾದ ಗ್ರಾಮಸ್ಥ.

ಗುಂಪುಗಳ ನಡುವಿನ ಗಲಾಟೆ ವೇಳೆ ಮಹದೇವನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಮಾಡಲಾಗಿದೆ. 2 ವರ್ಷಗಳ ಹಿಂದೆ ನಡೆದಿದ್ದ ಗಲಾಟೆಯೊಂದರ ಜಿದ್ದಿನಿಂದ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ. ಇನ್ನು ಗಲಾಟೆ ತಡೆಯಲು ಹೋದ ಮೂವರಿಗೆ ಗಂಭೀರ ಗಾಯಗಳಾಗಿದೆ.

ನಂಜುಂಡ, ಮಹದೇವಸ್ವಾಮಿ ಹಾಗೂ ಸೋಮ ಎಂಬ ಮೂವರು ಮಹದೇವನನ್ನ ಕೊಲೆಗೈದಿರುವ ಆರೋಪ ಕೇಳಿಬಂದಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Related Tags:

Related Posts :

Category:

error: Content is protected !!