ಎದೆಗೆ ಒದ್ದು ಪತ್ನಿಯ ಕೊಲೆಗೈದ ಕುಡುಕ ಪತಿರಾಯ, ಯಾವೂರಲ್ಲಿ?

  • KUSHAL V
  • Published On - 17:18 PM, 26 Oct 2020

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿಯಿರುವ ಬೇಗಿಹಳ್ಳಿಯಲ್ಲಿ ನಡೆದಿದೆ. ಕುಡುಕ ಪತಿರಾಯ ಕುಮಾರ್‌ ತನ್ನ ಪತ್ನಿ ಗೌರಮ್ಮಳನ್ನು ಕೊಲೆಗೈದಿದ್ದಾನೆ. ಸದ್ಯ, ಆರೋಪಿ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕುಮಾರ್ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ನಿನ್ನೆ ಸಹ ದಂಪತಿ ನಡುವೆ ಜಗಳವಾಗಿದೆ. ಈ ನಡುವೆ, ಗೌರಮ್ಮಳ ಮೇಲೆ ಹಲ್ಲೆ ನಡೆಸಿದ ಕುಮಾರ್ ಪತ್ನಿಯ ಎದೆಗೆ ಒದ್ದಿದ್ದಾನೆ ಎಂದು ತಿಳಿದುಬಂದಿದೆ. ಕುಮಾರ್‌ ಒದ್ದಿದ ರಭಸಕ್ಕೆ ಗೌರಮ್ಮ ಉಸಿರುಗಟ್ಟಿ ಸಾವನಪ್ಪಿದ್ದಾಳೆ.