ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ ಮಹಿಳೆಯನ್ನು ವಂಚಿಸಿದ್ದವ ಅರೆಸ್ಟ್

ಫೇಸ್​ಬುಕ್ ಮೂಲಕ ಗೆಳೆತನ ಬೆಳೆಸಿ ಮಹಿಳೆಯನ್ನು ವಂಚಿಸಿದ ವ್ಯಕ್ತಿಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿ 20 ಗ್ರಾಂ ಚಿನ್ನ, ₹40 ಸಾವಿರ ನಗದು, ಎಟಿಎಂ ಕಾರ್ಡ್​ ಮತ್ತು ಬೈಕ್​ ವಶಪಡಿಸಿಕೊಂಡಿದ್ದಾರೆ.

  • Ayesha Banu
  • Published On - 11:54 AM, 24 Nov 2020
ಫೇಸ್​ಬುಕ್​ ಮುಖಾಂತರ ಮಹಿಳೆಯನ್ನು ವಂಚಿಸಿದ ವ್ಯಕ್ತಿ ಸೆರೆ

ಮೈಸೂರು: ಫೇಸ್​ಬುಕ್​ನಲ್ಲಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡು ಆತ್ಮೀಯತೆ ಬೆಳೆಸಿಕೊಂಡು ವಂಚಿಸಿದ್ದ ವ್ಯಕ್ತಿಯನ್ನು ಮೇಟಗಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನಿಂದ 20 ಗ್ರಾಂ ಚಿನ್ನ, ₹40 ಸಾವಿರ ನಗದು, ಎಟಿಎಂ ಕಾರ್ಡ್​ ಮತ್ತು ಬೈಕ್​ ವಶಪಡಿಸಿಕೊಳ್ಳಲಾಗಿದೆ.

ಬಿಎಂಶ್ರೀ ನಗರದ ಮಹಿಳೆಯೊಬ್ಬರನ್ನು ಫೇಸ್​ಬುಕ್​ನಲ್ಲಿ ಪರಿಚಯ ಮಾಡಿಕೊಂಡಿದ್ದ ಆರೋಪಿ ದೇವರಾಜು ಚಾಟ್​ ಮಾಡುತ್ತಾ ಗೆಳೆತನ ಬೆಳೆಸಿಕೊಂಡಿದ್ದ. ಭೇಟಿಯಾಗಲು ಬಂದಾಗ ಮಹಿಳೆಗೆ ನಿದ್ದೆ ಮಾತ್ರೆ ಕೊಟ್ಟು, ಎಟಿಎಂ ಕಾರ್ಡ್​, ಚಿನ್ನ ಮತ್ತು ನಗದು ದೋಚಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇಂಥ ಇನ್ನಷ್ಟು ಪ್ರಕರಣಗಳ ವಿವರ ಪರಿಶೀಲಿಸುತ್ತಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.