ಸೇತುವೆ ಕೆಳಗೆ ನಿಂತಿದ್ದ ವ್ಯಕ್ತಿ ಏಕಾಏಕಿ ಹಳ್ಳದಲ್ಲಿ ಕೊಚ್ಚಿ ಹೋದ!

  • TV9 Web Team
  • Published On - 17:30 PM, 29 Jun 2020

ಧಾರವಾಡ: ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಬೆಳವಡಿ ಹಾಗೂ ಆಯಟ್ಟಿ ಗ್ರಾಮದ ನಡುವಿನ ಹಳ್ಳದಲ್ಲಿ ವ್ಯಕ್ತಿಯೊಬ್ಬರು ತೇಲಿಹೋಗಿರುವ ಘಟನೆ ನಡೆದಿದೆ.

ಆಕಳು ಮೇಯಿಸಲು ಹೋಗಿದ್ದ ಮಡಿವಾಳಪ್ಪ‌ ಜಕ್ಕನವರ್(45) ಮಳೆ ರಕ್ಷಣೆಗಾಗಿ ಸೇತುವೆ ಕೆಳಗೆ ನಿಂತಿದ್ದರು. ಆದ್ರೆ, ಏಕಾಏಕಿ ನೀರು ಹೆಚ್ಚಾಗಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.