ಗೆಳೆಯನ ನಂಬಿ ಲ್ಯಾಂಬೋರ್ಗಿನಿ ಕಾರ್​ ಕೊಟ್ಟ, ಆದರೇ ಪಡೆದುಕೊಂಡ ಗೆಳೆಯ ಮಾಡಿದ್ದೇನು?

ಗೆಳೆಯನಿಂದ ಪಡೆದುಕೊಂಡಿದ್ದ ಲ್ಯಾಂಬೋರ್ಗಿನಿ ಕಾರನ್ನು ವಿದ್ಯುತ್ ಸಬ್‌ಸ್ಟೇಷನ್‌ನ ಗೋಡೆಗೆ ಡಿಕ್ಕಿ ಹೊಡೆಸಿ, ಕಾರನ್ನು ಸಂಪೂರ್ಣ ನುಜ್ಜುಗುಜ್ಜಾಗಿಸಿರುವ ಘಟನೆ ಸ್ಪೇನ್‌ನಲ್ಲಿ ನಡೆದಿದೆ.

ಸುಮಾರು ಎರಡು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಜಾಲಿ ರೈಡ್​ಗೆಂದು ಗೆಳೆಯನಿಂದ ಪಡೆದುಕೊಂಡಿದ್ದ ವ್ಯಕ್ತಿ ತನ್ನ ಅಜಾಗರುಕತೆಯಿಂದ ಕಾರನ್ನು ವಿದ್ಯುತ್ ಸಬ್‌ಸ್ಟೇಷನ್‌ನ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ. ಇದರ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಹಾಳಾಗಿದೆ.

ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಕಾರಿನಲ್ಲಿದ್ದವರು ಪತ್ತೆಯಾಗಿಲ್ಲ. ಹೀಗಾಗಿ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಹುಡುಕಿದಾಗ ಪೊಲೀಸರಿಗೆ ಕಾರು ಅಪಘಾತ ಮಾಡಿದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

ಅಪಘಾತದ ಬಗ್ಗೆ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಕಾರಿನ ನಿಜವಾದ ಮಾಲಿಕ ಅಪಘಾತ ಮಾಡಿದ ಆರೋಪಿಯ ಸ್ನೇಹಿತನದು ಮತ್ತು ಆರೋಪಿ ಅದನ್ನು ಜಾಲಿ ರೈಡ್​ಗೆಂದು ಪಡೆದುಕೊಂಡಿದ್ದು ತಿಳಿದುಬಂದಿದೆ.

Related Tags:

Related Posts :

Category: