No more corona, ಜೂನ್ 1ರಿಂದ Free for all ಅಂದ್ರು ಮಮತಾ ದೀದಿ!

ಕೋಲ್ಕತ್ತಾ: ಕೊರೊನಾ ಕ್ರಿಮಿಯಾಟದ ಆರಂಭದಿಂದಲೂ ಲಾಕ್​ಡೌನ್​ ಬಗ್ಗೆ ಅಪಶ್ರುತಿ ಹಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೊರೊನಾ ಸಂಕಷ್ಟ ಸಾಕು ಸಾಕು ಅನ್ನಿಸಿದೆ. ಅದರ ಜೊತೆಗೆ ಅಂಫಾನ್ ಚಕ್ರಸುಳಿಯಲ್ಲಿ ಸಿಲುಕಿ ರಅಜ್ಯದ ಜನತೆ ಬಸವಳಿದಿದ್ದಾರೆ. ಹಾಗಾಗಿ, ಸಿಎಂ ಬ್ಯಾನರ್ಜಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಲಾಕ್​ಡೌನ್​ 4 ಮುಗಿಯುತ್ತಿದ್ದಂತೆ ಜೂನ್ 1ರಿಂದ ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳನ್ನೂ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ಪೂಜಾ ಮಂದಿರ, ಮಸೀದಿ, ಗುರುದ್ವಾರಗಳನ್ನು ಜೂನ್ 1ರಿಂದಲೇ ತೆರೆಯಲಾಗುವುದು. ಆದ್ರೆ 10 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಧಾರ್ಮಿಕ ಸ್ಥಳಗಳಲ್ಲಿ ಜನ ಜಮಾಯಿಸುವುದನ್ನು ನಿಷೇಧಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more