ಸಂಡೇ ಲಾಕ್​ಡೌನ್ ಇದ್ರೂ ಮೇಲುಕೋಟೆಯಲ್ಲಿಂದು ಬ್ರಹ್ಮೋತ್ಸವ!

ಮಂಡ್ಯ: ಇಂದು ರಾಜ್ಯಾದ್ಯಂತ ಸಂಡೇ ಲಾಕ್​ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಇಡೀ ಕರುನಾಡು ಸ್ತಬ್ಧವಾಗಿದೆ. ಆದರೆ ಸರ್ಕಾರದ ಆದೇಶ ಮೀರಿ ಮೇಲುಕೋಟೆಯಲ್ಲಿಂದು ಕೃಷ್ಣರಾಜಮುಡಿ ಬ್ರಹ್ಮೋತ್ಸವ ನಡೆಯುತ್ತಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಬ್ರಹ್ಮೋತ್ಸವಕ್ಕೆ ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡಿದೆ. ಬ್ರಹ್ಮೋತ್ಸವದಲ್ಲಿ 60 ವರ್ಷ ಮೇಲ್ಪಟ್ಟವರು ಕೂಡ ಭಾಗಿಯಾಗುತ್ತಿದ್ದಾರೆ. ಅಲ್ಲದೆ ವಿವಿಧ ಕಡೆಗಳಿಂದ ಜನ ಬಂರುವ ಸಾಧ್ಯತೆ ಇದೆ. ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ 1 ದಿನ ಮುಂಚಿತವಾಗಿಯೇ ಅಂದ್ರೆ ನಿನ್ನೆಯೇ ಜಿಲ್ಲಾಡಳಿತ ಕೃಷ್ಣರಾಜಮುಡಿ ಹಸ್ತಾಂತರಿಸಿದೆ.

ವಜ್ರಾಂಗಿ ಆಭರಣ ಕಳವು ವಿಚಾರ ಕೋರ್ಟ್‌ನಲ್ಲಿದೆ. ಹೀಗಿದ್ರೂ ಒಂದು ದಿನ ಮುಂಚಿತವಾಗಿ ಕಿರೀಟ ಹಸ್ತಾಂತರಿಸಲಾಗಿದೆ. ಇಷ್ಟು ವರ್ಷ ಉತ್ಸವದ ದಿನ ಮಾತ್ರ ಕಿರೀಟ ನೀಡಲಾಗುತ್ತಿತ್ತು. ಆದ್ರೆ ಸಂಡೇ ಲಾಕ್​ಡೌನ್ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆಯೇ ನೀಡಲಾಗಿದೆ. ಆದ್ರೆ ಬ್ರಹ್ಮೋತ್ಸವವನ್ನು ಎಲ್ಲ ರೀತಿಯ ನಿಯಮಗಳನ್ನು ಪಾಲಿಸಿ ದೇವಾಲಯದ ಆವರಣದಲ್ಲೇ ಮಾಡಲಾಗುತ್ತೆ ಎಂದಿದ್ದಾರೆ. ನೂರಾರು ಜನ ಬ್ರಹ್ಮೋತ್ಸವದಲ್ಲಿ ಸೇರಿದರೆ ಸಾಮಾಜಿಕ ಅಂತರ ಕಾಪಾಡುವುದು ಅಸಾಧ್ಯವಾಗಬಹುದು ಎಂಬುವುದು ಕೆಲವರ ಅಭಿಪ್ರಾಯ.

Related Tags:

Related Posts :

Category:

error: Content is protected !!