‘ಹಿಂದಿಯನ್ನು ಪ್ರೀತಿಸುತ್ತೇವೆ.. ಆದ್ರೆ, ಅದನ್ನು ನಮ್ಮ ಮೇಲೆ ಹೇರಲು ಬರಬೇಡಿ’

ದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಹಿಂದಿ ಹೇರಿಕೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಪ್ರಸ್ತಾಪಿಸಿದ್ದಾರೆ. ನಮ್ಮ ಮೇಲೆ ಹಿಂದಿ ಹೇರಲು ಬರಬೇಡಿ. ಹಿಂದಿ ಹೇರಿಕೆಯಿಂದ ಕಮ್ಯುನಿಕೇಷನ್‌ಗೆ ತೊಂದರೆಯಾಗುತ್ತೆ. ಹೀಗಾಗಿ, ಯಾವುದೇ ಕಾರಣಕ್ಕೂ ನಾವು ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ.

ದೇಶದೆಲ್ಲೆಡೆಯಿಂದ ಬರುವ ಜನರನ್ನು ಕರ್ನಾಟಕ ಪ್ರೀತಿಯಿಂದ ಬರಮಾಡಿಕೊಂಡಿದೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ, ಪರಂಪರೆಯಿದೆ. ಒಂದು ವೇಳೆ ದೇಶದ ಜನರ ಮೇಲೆ ಹಿಂದಿ ಹೇರಿಕೆಯಾದರೆ ಪ್ರಾದೇಶಿಕ ಭಾಷೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜೊತೆಗೆ, ಹಿಂದಿ ಹೇರಿಕೆಯಿಂದ ಹಲವಾರು ಸರ್ಕಾರಿ ಯೋಜನೆಗಳು ಮತ್ತು ಸವಲತ್ತುಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂದು ಸುಮಲತಾ ಮಾತನಾಡಿದ್ದಾರೆ.

ನಾವು ಹಿಂದಿ ಭಾಷೆಯನ್ನು ಪ್ರೀತಿಸುತ್ತೇವೆ. ಆದರೆ, ಅದಕ್ಕಿಂತ ಹೆಚ್ಚಾಗಿ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಸ್ತೇವೆ ಅಂತಾ ಲೋಕಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.

Related Tags:

Related Posts :

Category:

error: Content is protected !!