ಟೀಕಾಕಾರರಿಗೆ ತಕ್ಕ ತಿರುಗೇಟು ಕೊಟ್ಟ ಗಗನಸಖಿ ಅಶ್ವಿನಿ ಪೂಜಾರಿ

ವಂದೇ ಭಾರತ್ ಮಿಷನ್​ನಲ್ಲಿ ಪಾಲ್ಗೊಂಡಿದ್ದ ಗಗನಸಖಿ ಮಂಗಳೂರಿನ ಅಶ್ವಿನಿ ಕಾರ್ಯದ ಕುರಿತು ಜನರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ವಿನಿ ಟೀಕೆಗೆ ಗುರಿಯಾಗಿದ್ದರು. ಇದೀಗ ತಮ್ಮನ್ನ ಟೀಕಿಸಿದ್ದವರಿಗೆ ಅವರು ತಕ್ಕ ತಿರುಗೇಟು ನೀಡಿದ್ದಾರೆ.

ನಮ್ಮ ಜೀವಕ್ಕೆ ಏನೇ ಆಗಿದ್ದರು ನಾವೇ ಜವಾಬ್ದಾರರಾಗಿದ್ದೆವು. ವಿಮಾನ ಹೊರಡುವ ಮುನ್ನ, ನಂತರ 3-4 ಬಾರಿ ಟೆಸ್ಟ್ ಗಳು ಆಗುತ್ತವೆ. ವಿಮಾನದಲ್ಲಿಯೂ ಪಿಪಿಇ ಕಿಟ್​ ಹಾಕಿಕೊಂಡೇ ಇರಬೇಕು. ಊಟ, ನೀರು ಇಲ್ಲದೇ ಸುದೀರ್ಘ ಅವಧಿ ಪ್ರಯಾಣಿಸಬೇಕು. ವಾಶ್​ ರೂಂಗೆ ಹೋಗೋಕು ಅವಕಾಶ ಇಲ್ಲದ ಸ್ಥಿತಿ ಇರುತ್ತೆ. ಆದರೂ ಅಲ್ಲಿನ ನಮ್ಮವರಿಗಾಗಿ ಕೆಲಸ ‌ಮಾಡುತ್ತೇವೆ. ಇದಕ್ಕೆ ನಮಗೆ ಏರ್ ಇಂಡಿಯಾ ಹೆಚ್ಚು ಸಂಬಳ ಏನೂ ಕೊಡಲ್ಲ ಎಂದು ಗಗನಸಖಿ ಅಶ್ವಿನಿ ಪೂಜಾರಿ ತಮ್ಮ ಕಷ್ಟದ ಅನುಭವವನ್ನು ಹಂಚಿಕೊಂಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more