ಬಾಲಿವುಡ್​ ನಟ ಕಂ ಡ್ಯಾನ್ಸರ್​ ಕಿಶೋರ್​ಗೆ ಅಕ್ಟೋಬರ್​ 9ರವರೆಗೆ ನ್ಯಾಯಾಂಗ ಬಂಧನ

ದಕ್ಷಿಣ ಕನ್ನಡ: Drugs ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದ ಮಂಗಳೂರು ಮೂಲದ ಬಾಲಿವುಡ್​ ನಟ ಕಂ ಡ್ಯಾನ್ಸರ್ ಕಿಶೋರ್​ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಜೊತೆಗೆ, ಆತನ ಸಹಚರನನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳಿಗೆ ಅಕ್ಟೋಬರ್​ 9ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಿಶೋರ್ ಮತ್ತು ಅಕೀಲ್ ನೌಶೀನ್​ಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಮಂಗಳೂರಿನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ನಾರ್ಕೊಟಿಕ್ ಕ್ರೈಂ ಪೊಲೀಸರು ಆರೋಪಿಗಳನ್ನು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದರು. ಬಂಧಿತರು ಕಳೆದ ಆರು ದಿನಗಳಿಂದ ನಾರ್ಕೊಟಿಕ್ ಪೊಲೀಸರ ವಶದಲ್ಲಿದ್ದರು.

Related Tags:

Related Posts :

Category:

error: Content is protected !!