‘ಆ ಌಂಕರ್ ತುಂಬಾನೇ Drinks ಮಾಡೋಳು! ಇನ್ನು ನಾನು.. ಶೆಟ್ಟಿ ಅಲ್ಲ’

ದಕ್ಷಿಣ ಕನ್ನಡ: ಮಂಗಳೂರು CCB ಪೊಲೀಸರಿಂದ ಬಂಧನವಾಗಿರುವ ಬಾಲಿವುಡ್ ನಟ ಕಿಶೋರ್​ ಶೆಟ್ಟಿ ವಿಚಾರಣೆ
ತೀವ್ರಗೊಂಡಿದೆ. CCB ಹಾಗೂ ನಾರ್ಕೋಟಿಕ್ಸ್​ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ.

ವಿಚಾರಣೆ ವೇಳೆ ಅಕುಲ್​ ಬಗ್ಗೆ ಕೇಳಿದ ತನಿಖಾಧಿಕಾರಿಗಳಿಗೆ ರಿಯಾಲಿಟಿ ಶೋನಲ್ಲಿ ಅವರ ಪರಿಚಯವಾಯ್ತು ಎಂದು ಕಿಶೋರ್ ಉತ್ತರ ಕೊಟ್ಟಿದ್ದಾನಂತೆ. ಆದರೆ, ಡ್ರಗ್ಸ್ ವಿಚಾರದಲ್ಲಿ ನಂಟಿತ್ತಾ ಎಂಬ ಬಗ್ಗೆ ಪ್ರಶ್ನೆಗೆ ಕಿಶೋರ್ ಆ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಬೆಂಗಳೂರಿನ ನಟಿ ಕಂ ಌಂಕರ್‌ ಬಗ್ಗೆಯೇ ಹೆಚ್ಚು ಪ್ರಶ್ನೆ ಕೇಳ್ತಿರುವ ತನಿಖಾಧಿಕಾರಿಗಳಿಗೆ ದಕ್ಷಿಣ ಕರ್ನಾಟಕ ಮೂಲದ ಆ ನಟಿ ಹಲವು ಡ್ರಗ್ಸ್ ಪಾರ್ಟಿಗೆ ಬಂದಿದ್ದಳು. ಆದರೆ, ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಡ್ರಿಂಕ್ಸ್​ ಮಾಡುತ್ತಿದ್ದಳು ಅಂತಾ ಮಾಹಿತಿ ನೀಡಿದ್ದಾನಂತೆ.

ಆದ್ರೆ ಇದನ್ನು ನಂಬದ ಪೊಲೀಸರು ತಮ್ಮ ತನಿಖೆ‌ಯನ್ನು ಚುರುಕುಗೊಳಿಸಿದ್ದಾರೆ. ಈ ವೇಳೆ ಕಿಶೋರ್ ಆ ನಟಿ ಕಂ ನಿರೂಪಕಿ ಕಳೆದ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ಸೆಟಲ್ ಆಗಿದ್ದರು. ಕಳೆದ ಐದಾರು ವರ್ಷಗಳಿಂದ ಸಿನಿಮಾಗಳಲ್ಲಿ ಸಹ ನಟನೆ‌ ಮಾಡಿದ್ದಾರೆ ಎಂದು ಬಿಚ್ಚಿಟ್ಟಿದ್ದಾನಂತೆ.

ಕಿಶೋರ್ ಶೆಟ್ಟಿ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲ!
ವಿಚಾರಣೆ ವೇಳೆ ಮತ್ತೊಂದು ಕುತೂಹಲಕಾರಿ ಮಾಹಿತಿ ಬಯಲಾಗಿದ್ದು ನಟ ಕಿಶೋರ್ ಶೆಟ್ಟಿ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲವಂತೆ. ಬಾಲಿವುಡ್‌ನಲ್ಲಿ ಹೆಸರಿಗೆ ‘ಶೆಟ್ಟಿ’ ಎಂದು ಸೇರಿಸಿಕೊಂಡರೆ ಹೆಚ್ಚು ಮರ್ಯಾದೆ ಸಿಗುತ್ತದೆ. ಅವಕಾಶಗಳು ಹೆಚ್ಚಾಗಿ ಸಿಗುತ್ತೆ, ಲಿಂಕ್ ಸಹ ಬೆಳೆಯುತ್ತದೆ. ಹೀಗಾಗಿ ನನ್ನ ಹೆಸರಿಗೆ ‘ಶೆಟ್ಟಿ’ ಎಂದು ಸೇರಿಸಿಕೊಂಡಿದ್ದೇನೆ ಅಂತಾ CCB ಪೊಲೀಸರ ವಿಚಾರಣೆ ವೇಳೆ ಕಿಶೋರ್‌ನಿಂದ ಮಾಹಿತಿ ಲಭ್ಯವಾಗಿದೆ.

Related Tags:

Related Posts :

Category:

error: Content is protected !!