ಮದ್ದೂರು ತಾಲೂಕಿನ ಗುಡುಗೆರಿಯ ಗುರು ಅಮರ್ ರಹೇ

ಮಂಡ್ಯ : ಅಮರ್ ರಹೇ, ಗುರು ಅಮರ್ ರಹೇ, ಹುತಾತ್ಮ ಯೋಧ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದ ಗುರುವಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ… ಇದು ಹುತಾತ್ಮ ಗುರು ಅವರ ಮೃತ ಶರೀರರವನ್ನು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೇಳಿ ಬಂದ ಧ್ವನಿ.

ಎಚ್‍ಎಎಲ್‍ನಿಂದ ಸೇನಾ ವಾಹನದ ಮೂಲಕ ರಸ್ತೆ ಮಾರ್ಗವಾಗಿ ಗುರು ಅವರ ಮೃತ ದೇಹವನ್ನು ಹುಟ್ಟೂರು ಮದ್ದೂರು ತಾಲೂಕಿನ ಗುಡುಗೆರಿಯನ್ನು ತಲುಪಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಜನ ರಸ್ತೆ ಇಕ್ಕೆಲಗಳಲ್ಲಿ ನಿಂತು ಕಾಯ ತೊಡಗಿದರು. ಸೇನಾ ವಾಹನ ರಸ್ತೆಯಲ್ಲಿ ಸಾಗುತ್ತಿದ್ದಂತೆ ಗುರು ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿ ಜನ ಗೌರವ ಸಲ್ಲಿಸಿದರು. ಇನ್ನು ಕೆಲವರು ಸೇನಾ ವಾಹನ ನಿಲ್ಲಿಸಿ ಹೂವಿನ ಹಾರವನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!