ನೆಲಮಂಗಲ ಟೋಲ್ ಬಳಿ ರೊಚ್ಚಿಗೆದ್ದ ಕಾರ್ಮಿಕರು: KSRTC ಬಸ್​ಗೆ ಅಡ್ಡ ಹಾಕಿ, ಆಕ್ರೋಶ

ಬೆಂಗಳೂರು: ನಾಳೆಯಿಂದ ರಾಜ್ಯ ಸರ್ಕಾರ ಘೋಷಿಸಿರುವ ಬೆಂಗಳೂರು ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾವಿರಾರು ಜನ ರಾಜಧಾನಿಯಿಂದ ತಮ್ಮ ತವರೂರಿನ ಕಡೆ ಗುಳೆ ಹೋಗುತ್ತಿದ್ದಾರೆ. ಈ ಮಧ್ಯೆ, ಪ್ರಯಾಣಿಕರನ್ನ ಹತ್ತಿಸಿಕೊಳ್ಳದ್ದಕ್ಕೆ ಕಾರ್ಮಿಕರ ಗುಂಪೊಂದು KSRTC ಬಸ್​​ನ ಅಡ್ಡಹಾಕಿ ತಡೆದ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ.

ಟೋಲ್ ಬಳಿ ತಮ್ಮ ತಮ್ಮ ಊರುಗಳಿಗೆ ತೆರಳುವ ಬಸ್​ಗಾಗಿ ಕಾಯುತ್ತಿದ್ದ ಕೂಲಿ ಕಾರ್ಮಿಕರನ್ನ ಹತ್ತಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಕಾರ್ಮಿಕರು KSRTC ಬಸ್​ಗೆ ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹಲವಾರು ಕಾರ್ಮಿಕರು ಬೆಳಗ್ಗೆ 4 ಗಂಟೆಯಿಂದ ಬಸ್​ಗಾಗಿ ಕಾಯುತ್ತಿದ್ದರು. ಹಾಗಾಗಿ, ಬಸ್​ ನಿಲ್ಲಿಸದ ಹಿನ್ನೆಲೆಯಲ್ಲಿ ಕೆಲ ಹೊತ್ತು ಬಸ್​ಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಟಿವಿ9 ವರದಿ ಮಾಡಿದ ಬಳಿಕ ಎಚ್ಚೆತ್ತ KSRTC ಅಧಿಕಾರಿಗಳು ಟೋಲ್ ಗೇಟ್​ನಿಂದ 10 ಬಸ್​ಗಳ ಹೆಚ್ಚುವರಿ ವ್ಯವಸ್ಥೆ ಮಾಡಿದರು.

Related Tags:

Related Posts :

Category:

error: Content is protected !!