ಮೈಕ್‌ ಟೈಸನ್‌ ಮತ್ತೇ ಬಾಕ್ಸಿಂಗ್‌ ಕಣಕ್ಕೆ.. ನಾಕೌಟ್‌ ಪಂಚ್‌ಗೆ‌ ಫ್ಯಾನ್ಸ್‌ ಕಾತರ

ವಿಶ್ವ ವಿಖ್ಯಾತ ಹೆವಿವೇಟ್‌ ಬಾಕ್ಸಿಂಗ್‌ ಚಾಂಪಿಯನ್‌ ಮೈಕ್‌ ಟೈಸನ್‌ ಮತ್ತೆ ಬರುತ್ತಿದ್ದಾರೆ!  80 ಮತ್ತು 90ರ ದಶಕದಲ್ಲಿ ವಿಶ್ವಕ್ಕೆ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದ ಬಾಕ್ಸಿಂಗ್‌ ಮೋಡಿಗಾರ ಈಗ ಮತ್ತೆ ಬಾಕ್ಸಿಂಗ್‌ ರಿಂಗ್‌ನಲ್ಲಿ ಗ್ಲೌಸ್‌ ಹಾಕುವುದನ್ನ ಪ್ರಕಟಿಸುವುದರ ಮೂಲಕ ಅಸಂಖ್ಯಾತ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ.

ಹೌದು 54ವರ್ಷದ ಮೈಕ್‌ ಟೈಸನ್‌ ಸೆಪ್ಟೆಂಬರ್‌ 12ರಂದು ಮತ್ತೆ ಬಾಕ್ಸಿಂಗ್‌ ರಿಂಗ್‌ನಲ್ಲಿ ಫೈಟ್‌ ಮಾಡಲಿದ್ದಾರೆ. ಡಿಗ್ನಿಟಿ ಹೆಲ್ತ್‌ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಈ ಪಂದ್ಯ ನಡೆಯಲಿದೆ. ಎಂಟು ರೌಂಡ್‌ಗಳ ಈ ಪಂದ್ಯ ಪ್ರದರ್ಶನ ಪಂದ್ಯವಾಗಿದ್ದು, ಪೇ ಪರ್‌ ವಿವ್‌ ಮೂಲಕ ನೋಡಬಹುದು. ಅಷ್ಟೇ ಅಲ್ಲ ಸೋಷಿಯಲ್‌ ಮೀಡಿಯಾ ಥ್ರಿಲ್ಲರ್‌ ನಲ್ಲೂ ಕೂಡಾ ವೀಕ್ಷಿಸಬಹದಾದಗಿದೆ.

ಇನ್ನು ಈ ಪಂದ್ಯದಲ್ಲಿ ಟೈಸನ್‌ ಎದುರಾಳಿ 2003ರ ವಿಶ್ವ ಹೆವಿವೇಟ್‌ ಚಾಂಪಿಯನ್‌ 51ರ ಪ್ರಾಯದ ರಾಯ್‌ ಜೋನ್ಸ್‌ ಜೂನಿಯರ್‌. ಜೋನ್ಸ್‌ ಮಿಡ್ಲ್‌ವೇಟ್‌ ಮತ್ತು ಸೂಪರ್‌ ಮಿಡ್ಲ್‌ವೇಟ್‌ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ನಂತರ ಹೆವಿವೇಟ್‌ ಚಾಂಪಿಯನ್‌ ಗೆದ್ದು ವಿಶ್ವದಾಖಲೆ ಬರೆದವರು.

ಕೇವಲ 20ರ ಪ್ರಾಯದಲ್ಲಿಯೇ ವಿಶ್ವ ಹೆವಿವೇಟ್‌ ಚಾಂಪಿಯನ್‌ ಆಗಿ ವಿಶ್ವದಾಖಲೆ ಬರೆದಿದ್ದ ಟೈಸನ್‌ ಅಷ್ಟೇ ಬೇಗ ತಮ್ಮ ನಡವಳಿಕೆಯಿಂದಾಗಿ ಕುಖ್ಯಾತಿಯನ್ನೂ ಗಳಿಸಿದರು.

ಮೊದಲ 19 ಪಂದ್ಯಗಳನ್ನೂ ನಾಕ್‌ಔಟ್ ಮಾಡಿದ್ದ ಟೈಸನ್‌ 
ತಾವಾಡಿರುವ ಮೊದಲ 19 ಪಂದ್ಯಗಳನ್ನು ನಾಕ್‌ಔಟ್‌ನಲ್ಲಿಯೇ ಗೆದ್ದ ದಾಖಲೆ ಇವರ ಹೆಸರಿನಲ್ಲಿದೆ. ಆಕ್ರಮಣಕಾರಿ ಪಂಚ್‌ಗಳಿಂದ ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿದ್ದಾರೆ. ಈಗ ಮತ್ತೇ ಗ್ಲೌಸ್‌ ಹಾಕಿ ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Related Tags:

Related Posts :

Category:

error: Content is protected !!