ನನಗೆ ಯಾರೋ ಚೆಂಡು ಹೂ ತೋರಿಸಿ ಇದೇ ಗಾಂಜಾ ಅಂದಿದ್ರು -CT ರವಿ

  • TV9 Web Team
  • Published On - 15:42 PM, 9 Sep 2020

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಯಾರ ಕಾಲದಲ್ಲೂ ಇಷ್ಟು ಸಿರಿಯಸ್ ತನಿಖೆ ಆಗಿಲ್ಲ ಎಂದ್ರು.

ಡ್ರಗ್ಸ್ ಸೇವಿಸಿ ಡ್ರೈವ್ ಮಾಡ್ತಿದ್ದೆ ಅಂತಾ ಅಪಪ್ರಚಾರ ಮಾಡಿದ್ದರು!
ಇತ್ತೀಚೆಗೆ ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿರುವ ಡ್ರಗ್ಸ್ ಪ್ರಕರಣ ದಿನೇ ದಿನೇ ತನ್ನ ಆಯಾಮವನ್ನೇ ಬದಲಿಸುತ್ತಿದೆ. ಈ ನಡುವೆ ಮಾತನಾಡಿದ ಸಿ.ಟಿ ರವಿ ಯಾರ ಕಾಲದಲ್ಲೂ ಇಷ್ಟು ಸಿರಿಯಸ್ ತನಿಖೆ ಆಗಿರಲಿಲ್ಲ. ಆದ್ರೆ ನಾವು ಸೀರಿಯಸ್ ತನಿಖೆ ಮಾಡ್ತಿದ್ದೇವೆ ಎಂದು ಹೇಳಿದ್ರು. ನಂಗೂ ಡ್ರಗ್ಸ್​ಗೂ ತುಂಬಾ ದೂರ. ಆದ್ರೆ ನನಗೆ ಆಕ್ಸಿಡೆಂಟ್ ಆದಾಗ ನಾನು ಡ್ರಗ್ಸ್ ಸೇವಿಸಿ ಡ್ರೈವ್ ಮಾಡ್ತಿದ್ದೆ ಅಂತ ಅಪಪ್ರಚಾರ ಮಾಡಿದ್ರು.

ಡ್ರಗ್ಸ್ ಅನ್ನೋದು ನನಗೆ ಎಣ್ಣೆ ಸೀಗೆಕಾಯಿ ಇದ್ದಂಗೆ. ನನಗೆ ಯಾರೋ ಚೆಂಡು ಹೂ ತೋರಿಸಿ ಇದೇ ಗಾಂಜಾ ಅಂದಿದ್ರು. ನಾನು ಅದನ್ನೆ ಗಾಂಜಾ ಅಂತ ಭಾವಿಸಿದ್ದೇನೆ. ಗೊತ್ತಿರೋರು.. ಆಗಾಗ ಶ್ರೀಲಂಕಾ, ಮಲೇಶಿಯಾಗೆ ಹೋಗೋರು, ಪಾರ್ಟಿಯಲ್ಲಿ ಭಾಗವಹಿಸೋರು ಈ ಬಗ್ಗೆ ಹೇಳಲಿ. ಹಾಗೂ ನಟಿಯರ ಜೊತೆ ಸಂಬಂಧ ಇರೋರು ಈ ಬಗ್ಗೆ ಹೇಳಬಹುದು. ಆದ್ರೆ ನನಗೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಸೂಕ್ಷ್ಮವಾಗಿ ತಿಳಿಸಿದ್ರು.