ಬೇಸರವಾಗಿದೆ, ಆದರೆ ಯಾರ ಹತ್ತಿರ ಹೇಳಬೇಕು? ಸಂದರ್ಭ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುವೆ: ರೇಣುಕಾಚಾರ್ಯ

ಇಂದು ಮಧ್ಯಾಹ್ನ ನೂತನ ಸಚಿವರ ಪ್ರತಿಜ್ಞಾವಿಧಿ ವಿಚಾರಕ್ಕೆ ಸಂಬಂಧಿಸಿ ಸಚಿವ ಸ್ಥಾನ ಸಿಗದೇ ಇರೋದಕ್ಕೆ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • TV9 Web Team
  • Published On - 10:01 AM, 13 Jan 2021
ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು: ನನಗೆ ಬೇಸರವಾಗಿದೆ, ಆದರೆ ಯಾರ ಹತ್ತಿರ ಹೇಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಇಂದು ಮಧ್ಯಾಹ್ನ ನೂತನ ಸಚಿವರ ಪ್ರತಿಜ್ಞಾವಿಧಿ ವಿಚಾರಕ್ಕೆ ಸಂಬಂಧಿಸಿ ಸಚಿವ ಸ್ಥಾನ ಸಿಗದೇ ಇರೋದಕ್ಕೆ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಬೇಸರವಾಗಿದೆ, ಆದರೆ ಯಾರ ಹತ್ತಿರ ಹೇಳಬೇಕು. ಸಂದರ್ಭ ಬಂದಾಗ ನಾನು ಸೂಕ್ತ ತೀರ್ಮಾನ ಮಾಡುತ್ತೇನೆ. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿಲ್ಲ, ಅರ್ಜಿ ಹಾಕಿಲ್ಲ. ನಾನು ಸೋತಾಗಲೂ 63 ಸಾವಿರ ಮತ ಪಡೆದಿದ್ದೆ. ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಲಾಬಿ ಮಾಡುವುದಿದ್ದರೆ ಬೆಂಗಳೂರಿನಲ್ಲೇ ಇರಬಹುದಿತ್ತು. ಲಾಬಿ ಮಾಡಿದವರು ಸಚಿವರಾಗ್ತಾರೆ.

ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ..
ನನಗೆ ನನ್ನ ಕ್ಷೇತ್ರ ಜಿಲ್ಲೆ ಸಾಕು. ಸರ್ಕಾರ ಪ್ರಾದೇಶಿಕ ಭೌಗೋಳಿಕವಾಗಿ ಪ್ರಾಧಾನ್ಯತೆ ಬೇಕು. ಇದು ಕೇವಲ ಬೆಂಗಳೂರು, ಬೆಳಗಾವಿ ಸೀಮಿತ ಆಗಿದೆ. ಸರ್ಕಾರ ಅಂದರೆ ಬೆಂಗಳೂರು ಬೆಳಗಾವಿ ಮಾತ್ರ ಅಲ್ಲ. ಸಂಸದ ರಾಘವೇಂದ್ರ ಜೊತೆ ಚರ್ಚೆ ಏನು ಅಂತಾ ಬಹಿರಂಗಪಡಿಸಲ್ಲ. ಬೇಸರ ಆಗಿದೆ ನಿಜ. ಆದರೆ ಯಾರ ಹತ್ರ ಹೇಳಿಕೊಳ್ಳಬೇಕು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇನ್ನು ನಾನು ಮಾಲೀಕ ಅಲ್ಲ; ಸೇವಕ. ಸ್ವಾಭಿಮಾನ ಬಿಟ್ಟು ಬದುಕಲ್ಲ. ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ. ನನಗೆ ಸಾಮರ್ಥ್ಯ ಇಲ್ಲ, ಅಸಮರ್ಥ ನಾನು. ಮಧ್ಯ, ದಕ್ಷಿಣ, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ನನ್ನ ಸ್ವಯಂಕೃತ ಅಪರಾಧ, ಪ್ರಾಯಶ್ಚಿತ್ತ ಅನುಭವಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಹೇಳಿದ್ರು.

‘ಒಬ್ಬರನ್ನು ಕೈಬಿಡಬೇಕಾಗುತ್ತದೆ; ಸಣ್ಣಪುಟ್ಟ ವ್ಯತ್ಯಾಸಗಳಿವೆ; ಸಚಿವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುವೆ: ಸಿಎಂ ಯಡಿಯೂರಪ್ಪ