ರಾಮುಲು ಮಗಳ ಭರ್ಜರಿ ಮದುವೆ: ಒಂದಕ್ಕಿಂತಾ ಒಂದು ಸ್ಪೆಷಲ್!

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾಳ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆಗಾಗಿ ಅದ್ಧೂರಿ ವೇದಿಕೆ ನಿರ್ಮಾಣವಾಗುತ್ತಿದ್ದು, ಬೆಂಗಳೂರು ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಮದುವೆಗಾಗಿ 40 ಎಕರೆ ಜಾಗದಲ್ಲಿ ಬೃಹತ್ ಸೆಟ್:
ಶ್ರೀರಾಮುಲು ತನ್ನ ಮಗಳ ಮದುವೆಗೆ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಪ್ರಿಂಟ್ ಮಾಡ್ಸಿದ್ದಾರೆ. 40 ಎಕರೆ ಜಾಗದಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡುತ್ತಿದ್ದು, ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಹಾಗೂ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲಿ ಸೆಟ್ ನಿರ್ಮಾಣವಾಗುತ್ತಿದೆ. ಮೇಲುಕೋಟೆಯ ಕಲ್ಯಾಣಿಯ ಮಧ್ಯೆದಲ್ಲಿ ಮದುವೆ ಮುಹೂರ್ತಕ್ಕಾಗಿ ಮುನ್ನೂರು ಕಲಾವಿದರಿಂದ ಸುಂದರ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ವೆಡ್ಡಿಂಗ್ ಪ್ಲಾನರ್ ಧ್ರುವ ನೇತೃತ್ವದಲ್ಲಿ ಸೆಟ್​ಗಳು ನಿರ್ಮಾಣವಾಗುತ್ತಿವೆ.

27 ಎಕರೆ ಮದುವೆ ಸೆಟ್, 4 ಎಕರೆಯಲ್ಲಿ ಮದುವೆ ಕಾರ್ಯ, 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ನಿರ್ಮಾಣವಾಗುತ್ತಿದೆ. ಮುಹೂರ್ತ ಮಂಟಪದಲ್ಲಿ ನಾಲ್ಕು ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಹೂವಿನ ಅಲಂಕಾರ ಮಾಡಲು 200 ಜನ ನಿಯೋಜನೆಗೊಂಡಿದ್ದಾರೆ. ಮದುವೆಯ ಎಲ್ಲ ಸೆಟ್ ರೆನಾಲ್ಡ್ಸ್ ಕಂಪನಿಯಿಂದ ಸೌಂಡ್ ಅಂಡ್ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಏಳು ಸಾವಿರ ಮಂದಿ ಒಂದೇ ಬಾರಿ ಊಟ ಮಾಡುವಂತಹ ವ್ಯವಸ್ಥೆ ಇದೆ.

ಇನ್ನು ಮದುವೆಗೆ ರುಚಿಯಾದ ವಿಷೇಶವಾದ ಊಟ ತಯಾರಾಗುತ್ತಿದ್ದು. ಸಾವಿರ ಜನ ಬಾಣಿಸಿಗರು ಸೇರಿ ಊಟ ರೆಡಿ ಮಾಡಲಿದ್ದಾರೆ. ಐನೂರು ಜನರಿಂದ ಊಟ ಬಡಿಸುವ ಕಾರ್ಉಯ ನಡೆಯಲಿದೆ. ಇವರೆಲ್ಲ ಉತ್ತರ ಕರ್ನಾಟಕವರು. ಗದಗ ಬಾಲಚಂದ್ರ, ಹುಬ್ಬಳ್ಳಿ ಶಂಭು, ಬೆಂಗಳೂರಿನ ಮೈಯ ಕ್ಯಾಟರಿಂಗ್ ಅವರಿಂದ ಅಡುಗೆ ತಯಾರಿ ನಡೆಯುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದ್ದು, ರಾಜ್ಯದ ಹಲವೆಡೆಗಳಿಂದ ಬರುವವರಿಗೆ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಆಯೋಜನೆ ಮಾಡಲಾಗಿದೆ.

ದೀಪಿಕಾ ಪಡುಕೋಣೆಗೆ ಮೇಕಪ್ ಮಾಡಿದವರಿಂದಲೇ ರಕ್ಷಿತಾಗೆ ಮೇಕಪ್:
ಮಾರ್ಚ್3ರಂದು ಬೆಂಗಳೂರು ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಮಧುಮಗಳು ರಕ್ಷಿತಾ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮಾರ್ಚ್4ರಂದು ಬರುವ ವರನ ಕಡೆಯವರಿಗೆ ಬೆಂಗಳೂರಿನ ಪಂಚತಾರಾ ಹೋಟೆಲ್​ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ಗುರುಕಿರಣ್ ನೇತೃತ್ವದ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯುತ್ತೆ.

ಸ್ಯಾಂಡಲ್ ವುಡ್ ಸ್ಟಾರ್ ಸಾನಿಯಾ ಸರ್ದಾರಿಯಾ ಅವರಿಂದ ಮದುಮಗಳು ರಕ್ಷಿತಾ ಅವರ ಉಡುಪು ವಿನ್ಯಾಸವಾಗುತ್ತಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ಸಮಯದಲ್ಲಿ ಮೇಕಪ್ ಮಾಡಿದವರೇ ರಕ್ಷಿತಾಗೆ ಮೇಕಪ್ ಮಾಡಲಿದ್ದಾರೆ. ಉದ್ಯಮಿ ಅಂಬಾನಿ ಮಗನ ಮದುವೆ ಫೋಟೋ, ವೀಡಿಯೋ ತೆಗೆದ ಜಯರಾಮನ್ ಪಿಳ್ಳೈ ಜೊತೆ ದಿಲೀಪ್ ಅವರಿಂದ ಶ್ರೀರಾಮುಲು ಪುತ್ರಿಯ ಮುದುವೆ ಫುಲ್ ವಿಡಿಯೋ ಚಿತ್ರೀಕರಣವಾಗಲಿದೆ.

Related Tags:

Related Posts :

Category:

error: Content is protected !!