ಇಲ್ಲಿನ ಗರುಡಸ್ವಾಮಿಯ ವಿಗ್ರಹ, ಉತ್ಸವ ಮುಗಿದ ನಂತರ ಬೆವರುತ್ತೆ.. ಭಾರವಾಗುತ್ತೆ!

ಓಡಾಡಲು ತರಹೇವಾರಿ ವಾಹನಗಳನ್ನ ಇಟ್ಟುಕೊಂಡಿರುವಂತೆ, ಪುರಾಣಕಾಲದಲ್ಲಿ ಒಂದೊಂದು ದೇವರಿಗೂ ಒಂದೊಂದು ಪ್ರಾಣಿಗಳ, ಪಕ್ಷಿಗಳ ವಾಹನಗಳಿದ್ದವು. ಅಂತೆಯೇ ಮಹಾಮಹಿಮ ಮಹಾವಿಷ್ಣುವಿನ ವಾಹನ ಗರುಡ ಪಕ್ಷಿ. ತಮ್ಮನ್ನ ಹೊತ್ತು ತಿರುಗುವ ತಮ್ಮ ವಾಹನಗಳಿಗೂ ದೇವತೆಗಳು ವಿಶೇಷ ಸ್ಥಾನ-ಮಾನ ನೀಡಿದ್ದಾರೆ. ಹಾಗೆಯೇ ವಿಶೇಷ ಸ್ಥಾನಗಳಿಸಿದ ದೇವತೆಗಳ ವಾಹನಗಳಲ್ಲಿ ಮಹಾವಿಷ್ಣುವಿನ ವಾಹನವಾದ ಗರುಡ ಪಕ್ಷಿಯೂ ಒಂದು.

ಮಹಾವಿಷ್ಣುವಿನ ವಾಹನ ಗರುಡನಿಗೆ ಈ ಮಂದಿರದಲ್ಲಿ ವಿಶೇಷ ಸ್ಥಾನಮಾನವಿದೆ. ಇಲ್ಲಿ ಮಹಾವಿಷ್ಣುಗೂ ಮೊದಲು ಗರುಡನಿಗೆ ಪೂಜೆ ಸಲ್ಲಿಸಲಾಗುತ್ತೆ. ಇಲ್ಲಿ ಮಹಾವಿಷ್ಣು, ಮಹಾಲಕ್ಷ್ಮೀಗೂ ಮುಂಚೆ ಗರುಡ ಸ್ವಾಮಿ ಪೂಜೆಗೊಳ್ಳುವುದರ ಹಿಂದೆ ಕುತೂಹಲಕಾರಿ ಕಥೆಯೊಂದಿದೆ.

ಒಮ್ಮೆ ಭೃಗು ಮಹರ್ಷಿ ವೈಕುಂಠಕ್ಕೆ ಬಂದಾಗ, ಶ್ರೀಮನ್ನಾರಾಯಣ ಯೋಗನಿದ್ದೆಯಲ್ಲಿರುತ್ತಾನೆ. ಭೃಗು ಮಹರ್ಷಿ ಎಷ್ಟೇ ಕೂಗಿದರು ಶ್ರೀಹರಿ ತನ್ನ ಮೊರೆಯನ್ನ ಆಲಿಸಿಲಿಲ್ಲ ಎಂದು ನಾರಾಯಣನ ವಕ್ಷಸ್ಥಲಕ್ಕೆ ಕಾಲಲ್ಲಿ ಒದೆಯುತ್ತಾನೆ. ತಾನು ವಾಸವಿರುವ ಶ್ರೀಹರಿಯ ವಕ್ಷಸ್ಥಲಕ್ಕೆ ನರ ಮಾನವನೊಬ್ಬ ಒದ್ದದ್ದನ್ನು ಸಹಿಸದೆ ಮಹಾಲಕ್ಷ್ಮೀ ಶ್ರೀಪತಿನಾರಾಯಣನನ್ನು, ವೈಕುಂಠವನ್ನ ತೊರೆದು ಭೂಲೋಕಕ್ಕೆ ಬರುತ್ತಾಳೆ.

ವೈಕುಂಠ ತೊರೆದು ಭೂಲೋಕಕ್ಕೆ ಬಂದಾಗ ವಿರಹ ವೇದನೆಯಲ್ಲಿದ್ದ ಶ್ರೀಹರಿಗೆ, ತನ್ನ ಪತ್ನಿ ಮಹಾಲಕ್ಷ್ಮೀಯನ್ನ ಹುಡುಕಲು ಗರುಡ ಪಕ್ಷಿ ಸಹಾಯ ಮಾಡಿದ ಕಾರಣಕ್ಕಾಗಿ ಶ್ರೀಹರಿ ತನ್ನ ವಾಹನ ಗರುಡನಿಗೆ ಈ ದೇವಾಲಯದಲ್ಲಿ ಮೊದಲ ಪೂಜೆ ನಿನಗೆ ಮುಡಿಪಾಗಿರಲಿ ಎಂದು ಅನುಗ್ರಹಿಸಿದನಂತೆ.

ಗರುಡನ ಈ ಮಂದಿರದಲ್ಲಿ ಎದುರಾಗುತ್ತೆ ಒಂದು ಅಚ್ಚರಿ:
ತನ್ನ ಅರ್ಧಾಂಗಿಯನ್ನ ಹುಡುಕಲು ತನಗೆ ಸಹಕರಿಸಿದ ಗರುಡನಿಗೆ ಶ್ರೀಹರಿ ತನಗಿಂತ ಮೊದಲು ಪೂಜೆ ಪಡೆಯುವಂತೆ, ಕಷ್ಟವೆಂದು ಬರುವ ಭಕ್ತರ ಸಂಕಷ್ಟಗಳನ್ನ ಪರಿಹರಿಸುವಂತೆ ಅನುಗ್ರಹಿಸುತ್ತಾರೆ. ಜಗಪಾಲಕನೇ ಸಂಕಷ್ಟದಲ್ಲಿದ್ದಾಗ ಅವನಿಗೆ ಸಹಾಯ ಮಾಡಿ, ಮಹಾವಿಷ್ಣುವಿನಿಂದ ಅನುಗ್ರಹಿತನಾದ ಈ ಗರುಡನ ಬಳಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಮೊರೆ ಇಡುತ್ತಾರೆ.

ತಮಿಳುನಾಡಿನ ತಿರುಚಿನಾರ್ ಬಳಿಯಿರುವ ನಾಚಿಯಾರ್ ನಲ್ಲಿನ ಈ ಗರುಡ ದೇವಾಲಯದಲ್ಲಿ ಒಂದು ಅಚ್ಚರಿ ಎದುರಾಗುತ್ತೆ. ಅಂತಹ ಅಚ್ಚರಿಯು ಗರುಡಸ್ವಾಮಿಯ ಉತ್ಸವ ಮೂರ್ತಿಯನ್ನ ಏಕಾದಶಿ ಉತ್ಸವದಂದು ಪಲ್ಲಕ್ಕಿಯಲ್ಲಿ ಕೂರಿಸಿದಾಗ ಎದುರಾಗುತ್ತೆ.

ಉತ್ಸವ ಮೂರ್ತಿಯಾಗಿ ಪಲ್ಲಕ್ಕಿಯಲ್ಲಿ ವಿರಾಜಿಸುವ ಗರುಡ ಸ್ವಾಮಿಯು ಬರುಬರುತ್ತಾ ತನ್ನ ಭಾರವನ್ನು ಹೆಚ್ಚಿಸಿಕೊಳ್ಳುತ್ತಾನೆ. ಮೆರವಣಿಗೆ ಆರಂಭವಾದಾಗ ಮಾಮೂಲಿಯಾಗಿ ಇರುವ ಉತ್ಸವ ವಿಗ್ರಹದ ವಸ್ತ್ರಗಳು, ವಾಪಸ್ ಬರುವಷ್ಟ್ರಲ್ಲಿ ಸಂಪೂರ್ಣವಾಗಿ ನೆನೆದು ಹೋಗಿರುತ್ತೆ. ಅಷ್ಟಕ್ಕೂ ಗರುಡ ಸ್ವಾಮಿಯ ವಸ್ತ್ರ ಯಾಕೆ ಹೀಗೆ ನೆನೆದು ಹೋಗುತ್ತವೆ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ಅಚ್ಚರಿಗಳ ಆಲಯ.. ಪುರಿ ದೇಗುಲದಲ್ಲಿ ವಿಜ್ಞಾನ ಲೋಕವೇ ಚಕಿತಗೊಳ್ಳುವಂತಹ ಅಚ್ಚರಿ!

Related Tags:

Related Posts :

Category: