ದರ್ಗಾ ಬಳಿ ಹಾಕಿದ್ದ ಅಂಗಡಿಗಳನ್ನು ಬಲವಂತವಾಗಿ ತೆರವುಗೊಳಿಸಿದ ದುಷ್ಕರ್ಮಿಗಳು

  • Ayesha Banu
  • Published On - 14:38 PM, 23 Oct 2020

ಬೆಳಗಾವಿ: ದರ್ಗಾ ಬಳಿ ಹಾಕಿದ್ದ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ತೆರವುಗೊಳಿಸಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿ ಹೊರವಲಯದ ದರ್ಗಾ ಬಳಿ ನಡೆದಿದೆ.

ದುಷ್ಕರ್ಮಿಗಳ ಗುಂಪೊಂದು ಹಿರೇಕುಂಬಿ ಹೊರವಲಯದ ದರ್ಗಾ ಅಕ್ಕಪಕ್ಕದ ಅಂಗಡಿಗಳನ್ನು ಬಲವಂತವಾಗಿ ಹೊಡೆದು ಧ್ವಂಸ ಮಾಡಿದ್ದಾರೆ. ಜಮೀನುಗಳಿಗೆ ಹೋಗಲು ಜಾಗ ಇಲ್ಲವೆಂಬ ಕಾರಣದಿಂದ ಹೀಗೆ ಮಾಡಿದ್ದಾರೆ. ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳಿತ್ತಿದ್ದವರ ಮೇಲೆ ಅಟ್ಟಹಾಸ ತೋರಿಸಿದ್ದಾರೆ.

ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಅಂಗಡಿ ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಷ್ಟೆಲ್ಲಾ ಆದರೂ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿಲ್ಲ. ಹೀಗಾಗಿ ಸ್ಥಳೀಯರು ಖಾಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.