ರಾತ್ರೋರಾತ್ರಿ ದುಷ್ಕರ್ಮಿಗಳಿಂದ ದೇವಸ್ಥಾನ ಧ್ವಂಸ, ಭಕ್ತರಿಂದ ಪ್ರತಿಭಟನೆ

ಬೆಂಗಳೂರು: ಮೂರು ತಿಂಗಳ ಹಿಂದೆ ಕಟ್ಟಿದ್ದ ದೇವಸ್ಥಾನವನ್ನ ದುಷ್ಕರ್ಮಿಗಳು ರಾತ್ರೋ ರಾತ್ರಿ ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಬಳಿ ಇರುವ ಪ್ರಕೃತಿನಗರದಲ್ಲಿ ಸಂಭವಿಸಿದೆ.

ಪ್ರಕೃತಿ ನಗರದ ನಿವಾಸಿಗಳು ವಿದ್ಯಾ ಚೌಡೇಶ್ವರಿ ದೇವಾಲಯ ಹಾಗೂ ಮಠ ನಿರ್ಮಿಸಲು ಹುಲಿಯೂರು ದುರ್ಗ ವಿದ್ಯಾಸಂಸ್ಥಾನ ಮಠಕ್ಕೆ ಈ ಜಾಗವನ್ನು ದಾನವಾಗಿ ನೀಡಿದ್ದರು. ಹೀಗಾಗಿ ಮೂರು ತಿಂಗಳ ಹಿಂದೆ ಇಲ್ಲಿ ಸ್ಥಳೀಯ ಭಕ್ತರ ನೆರವಿನೊಂದಿಗೆ ಹುಲಿಯೂರು ದುರ್ಗ ಮಹಾಸಂಸ್ಥಾನ ಮಠದಿಂದ ಇಲ್ಲಿ ದೇವಸ್ಥಾನವನ್ನು ಕಟ್ಟಲಾಗಿತ್ತು. ನಂತರ ಮಠದ ಸ್ವಾಮೀಜಿಗಳು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯದಲ್ಲಿ ತೊಡಗಿದ್ದರು.

ಆದರೆ, ಕಳೆದ ರಾತ್ರಿ ಏಕಾಏಕಿ ಆಗಮಿಸಿದ ಕೆಲ ದುಷ್ಕರ್ಮಿಗಳು ಜೆಸಿಬಿಯಿಂದ ಮಠವನ್ನ ದ್ವಂಸಮಾಡಿದ್ದಾರೆ. ಇದ್ರಲ್ಲಿ ತಿಪ್ಪಣ್ಣ ಎಂಬುವವರ ಕೈವಾಡವಿದೆಯಂದು ಕೆಲ ಭಕ್ತರು ಆರೋಪಿಸಿದ್ದಾರೆ. ಇಂಥ ಹೀನ ಕಾರ್ಯ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಆಕ್ರೋಶಗೊಂಡಿರುವ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Tags:

Related Posts :

Category:

error: Content is protected !!