ಮನೆ ಮುಂದೆ ಮಲಗಿದ್ದವನ ತಲೆ ಮೇಲೆ ಕಲ್ಲು ಹಾಕಿ ಕೊಲೆ!

ಕೋಲಾರ: ಮಲಗಿದ್ದ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಆಲಗಾನಹಳ್ಳಿಯಲ್ಲಿ ನಡೆದಿದೆ. ಹರೀಶ್(32) ಕೊಲೆಯಾದ ವ್ಯಕ್ತಿ.

ಹರೀಶ್ ರಾತ್ರಿ ಮನೆ ಮುಂದೆ ಮಲಗಿದ್ದ ಈ ವೇಳೆ ಯಾರೋ ದುಷ್ಕರ್ಮಿಗಳು ಅವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗ್ಗೆ ಎದ್ದು ಮನೆಯಿಂದ ಆಚೆ ಬಂದವರಿಗೆ ಭೀಯರ ದೃಶ್ಯ ಕಂಡಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts :

Category:

error: Content is protected !!