APMC ಈರುಳ್ಳಿ ಖರೀದಿಗೆ ಬಂದಿದ್ದ ಆಟೋ ಚಾಲಕನ ಕೊಚ್ಚಿ ಕೊಲೆ.. ಯಾವೂರಲ್ಲಿ?

ನೆಲಮಂಗಲ: ದುಷ್ಕರ್ಮಿಗಳು ಆಟೋ ಚಾಲಕನ ತಲೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ನರಸಿಪುರದಲ್ಲಿ ನಡೆದಿದೆ. ವೈಟ್‌ಫೀಲ್ಡ್ ಮೂಲದ ರಾಮ್ ರಾವ್ (40) ಮೃತ ದುರ್ದೈವಿ.

ಮೃತ ರಾಮ್ ರಾವ್ ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸೇತುಪಾಳ್ಯ ನಿವಾಸಿ. ಈತ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಈರುಳ್ಳಿ ಖರೀದಿಸಲು ಅಟೋದಲ್ಲಿ ಬಂದಿದ್ದ ಈ ವೇಳೆ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಪೋಲಿಸರು ನಿಖರ ಮಾಹಿತಿ ಕಲೆಹಾಕುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Tags:

Related Posts :

Category:

error: Content is protected !!