ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗೆ ಸಾಮಾಜಿಕ ಜಾಲತಾಣ ಬಳಸಿರುವ ದುಷ್ಕರ್ಮಿಗಳು

ಬೆಂಗಳೂರು: ಡಿಜೆ ಹಳ್ಳಿ-ಕೆಜಿ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಉಂಟು ಮಾಡಲು ಕೆಲ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣವನ್ನು ಬಳಸಿದ ಆಘಾತಕಾರಿ ವಿಷಯ ಈಗ ಬೆಳಕಿಗೆ ಬಂದಿದೆ.

ಹೌದು ಡಿಜೆ ಹಳ್ಳಿ-ಕೆಜಿ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗಲಾಟೆಯನ್ನು ಲೈವ್ ವಿಡಿಯೋ ಮಾಡುವ ಮುಖಾಂತರ ಜನರನ್ನು ಕೆಲ ದುಷ್ಕರ್ಮಿಗಳು ಕರೆಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸೈಯದ್ ಸೊಯಿಲ್ ಎಂಬಾತನ ಇನ್‌ಸ್ಟಾಗ್ರಾಮ್ ಖಾತೆ ಚಾಲ್ತಿಯಲ್ಲಿದೆ. 63 ಸಾವಿರ ಫಾಲೋವರ್ಸ್ ಹೊಂದಿರುವ ಈ ವ್ಯಕ್ತಿ ಠಾಣೆಯ ಬಳಿ ನಡೆದ ಪ್ರತಿ ಘಟನೆಯನ್ನು ಅಪ್ಲೋಡ್ ಮಾಡಿದ್ದಾನೆ.

 10 ನಿಮಿಷದಲ್ಲಿ ತನ್ನವರು ಸ್ಥಳಕ್ಕೆ ಬಂದಿದ್ದಾರೆಂದು ಉಲ್ಲೇಖ
ಹ್ಯಾಷ್ ಟ್ಯಾಗ್ ಟೀಮ್ಸ್ ಆಫ್ ಬ್ಯಾಂಗಲೂರ್ ಎಂಬ ಉಲ್ಲೇಖದೊಂದಿಗೆ ಘಟನೆಯ ದೃಶ್ಯಗಳನ್ನು ತನ್ನ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಪ್ಲೋಡ್ ಮಾಡಿ ಹೇಳಿದ 10 ನಿಮಿಷದಲ್ಲಿ ತನ್ನವರು ಸ್ಥಳಕ್ಕೆ ಬಂದಿದ್ದಾರೆಂದು ಉಲ್ಲೇಖ ಮಾಡಿದ್ದಾನೆ. ಇವನಲ್ಲದೇ ಇದೇ ರೀತಿ ಇನ್ನೂ ಹಲವು ಮಂದಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಕೃತ್ಯವೆಸಗಿದ್ದಾರೆ.

ಈ ಸಂಬಂಧ ಈಗ ಸೈಯದ್ ಸೋಹಿಲ್ ಹೆಸರಿನ ಖಾತೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಚಾರಣೆಗಾಗಿ ಆತನ ಹುಡುಕಾಟ ಆರಂಭಿಸಿದ್ದಾರೆ.

Related Tags:

Related Posts :

Category: