ಕಾಣೆಯಾಗಿದ್ದ ತಾಯಿ, ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆ! ಎಲ್ಲಿ?

ಚಿಕ್ಕಮಗಳೂರು: ಕಳೆದ ಎರಡು ದಿನಗಳ ಹಿಂದೆ ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿ ಕಾಣೆಯಾಗಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಹುಣಸೇಕೊಪ್ಪ ಬಳಿ ನಡೆದಿತ್ತು. ಇಂದು ತೋಟವೊಂದರ ಕೆರೆಯಲ್ಲಿ ಆ ಮೂವರ ಮೃತದೇಹ ಪತ್ತೆಯಾಗಿದೆ.

ಕಾಣೆಯಾಗಿದ್ದ ತಾಯಿ, ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಬ್ಬರು ಮಕ್ಕಳ ಜೊತೆ ಸೇರಿ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹುಣಸೇಕೊಪ್ಪ ಬಳಿ ಕೆರೆಯಲ್ಲಿ ತಾಯಿ ಲಕ್ಷ್ಮೀ(30), ಸೌಜನ್ಯ(5), ಆದ್ಯಾ(2) ಮೂವರ ಮೃತದೇಹ ಸಿಕ್ಕಿದೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Tags:

Related Posts :

Category:

error: Content is protected !!