ಯಡಿಯೂರಪ್ಪನವರ ನೋಡಲಾರದಂತಹ CDಗಳು ಇವೆ -BSY ವಿರುದ್ಧ ಯತ್ನಾಳ್​ ಗುಡುಗು

CD ಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಭ್ರಷ್ಟಾಚಾರ ಮಾತ್ರ ಇಲ್ಲ. ನೋಡಲು ಆಗದಂಥ CD ಗಳು ಇವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ. ಯಡಿಯೂರಪ್ಪನವರ ನೋಡಲಾರದಂತಹ CD ಗಳು ಇವೆ ಎಂದು ಕೂಡಲಸಂಗಮದಲ್ಲಿ ಶಾಸಕ ಬಸನಗೌಡ ಯತ್ನಾಳ್​ ಹೇಳಿದ್ದಾರೆ.

  • TV9 Web Team
  • Published On - 16:30 PM, 14 Jan 2021
ಬಸನಗೌಡ ಪಾಟೀಲ್​ ಯತ್ನಾಳ್​ (ಎಡ); ಬಿ.ಎಸ್​.ಯಡಿಯೂರಪ್ಪ (ಬಲ)

ಬಾಗಲಕೋಟೆ: CD ಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಭ್ರಷ್ಟಾಚಾರ ಮಾತ್ರ ಇಲ್ಲ. ನೋಡಲು ಆಗದಂಥ CD ಗಳು ಇವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ. ಯಡಿಯೂರಪ್ಪನವರ ನೋಡಲಾರದಂತಹ CD ಗಳು ಇವೆ ಎಂದು ಕೂಡಲಸಂಗಮದಲ್ಲಿ ಶಾಸಕ ಬಸನಗೌಡ ಯತ್ನಾಳ್​ ಹೇಳಿದ್ದಾರೆ.

ಕಾಂಗ್ರೆಸ್​ನವರು ಸಹ CD ಇಟ್ಕೊಂಡು ಹೆಚ್ಚು ಅನುದಾನ ಪಡೆಯುತ್ತಿದ್ದಾರೆ. ಮತ್ತೆ ನಾವು ಕೇಳಿದ್ರೆ ವಿಷ ಕುಡಿಯಲು ಹಣವಿಲ್ಲ ಅಂತೀರಿ ಎಂದು ಸಿಎಂ ಬಿಎಸ್​ವೈ ವಿರುದ್ಧ ಶಾಸಕ ಯತ್ನಾಳ್​ ಆಕ್ರೋಶ ಹೊರಹಾಕಿದರು.

‘BSY ಮನೆಯಲ್ಲಿ ಅವರ ಮನೆಯವರೇ ಮಾಡಿದ CDಗಳಿವೆ’
ನೀವು ರಾಜಾಹುಲಿ ರಾಜಾಹುಲಿ ಅಂತಾ ತೋರಿಸ್ತೀರಿ ಎಂದು ಸಿಎಂ ಯಡಿಯೂರಪ್ಪ ಬಗ್ಗೆ ಯತ್ನಾಳ್‌‌ ವ್ಯಂಗ್ಯವಾಡಿದರು. ಯಡಿಯೂರಪ್ಪ ಮನೆಯಲ್ಲಿ ಅವರ ಮನೆಯವರೇ ಮಾಡಿದ CD ಗಳಿವೆ. ಯಡಿಯೂರಪ್ಪ ಮೊಮ್ಮಕ್ಕಳೇ ಅವರ ಬಗ್ಗೆ ಸಿಡಿ ಮಾಡಿದ್ದಾರೆ ಎಂದು ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಶಾಸಕ ಬಸನಗೌಡ ಯತ್ನಾಳ್​ ಹೇಳಿದ್ದಾರೆ.

ಅವರ ಸಿಡಿ ಅವರ ಮನೆಯಲ್ಲೇ ಅವರ ಮೊಮ್ಮಗನೇ ಮಾಡಿದ್ದು. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಎಂದು ಗೊತ್ತಿದೆ. ನಾನು ಆ ಬಗ್ಗೆ ಏನೂ ಹೇಳಬೇಕಿಲ್ಲ ಎಂದ ಶಾಸಕ ಯತ್ನಾಳ್​ ಆ ಸಿಡಿಯನ್ನೇ ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ರು ಎಂದು ಹೇಳಿದರು.ಆ ಸಿಡಿ ಇಟ್ಟುಕೊಂಡೇ ಅನುದಾನವನ್ನ ತೆಗೆದುಕೊಳ್ಳುತ್ತಿದ್ದಾರೆ. ಅದೇ ಸಿಡಿ ಇಟ್ಕೊಂಡೇ ಕಾಂಗ್ರೆಸ್​ನವರು ಸಹ ಅನುದಾನ ಪಡೀತಿದ್ದಾರೆ. ನಿಜವಾಗಲೂ ವಿಪಕ್ಷ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಯತ್ನಾಳ್​ ಕಾಂಗ್ರೆಸ್​ ನಾಯಕರಿಗೆ ಸವಾಲ್​ ಹಾಕಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಳಿ ಸಿಡಿ ಇದೆ ಎಂದು ಗೊತ್ತಾಗುತ್ತೆ. ಅವರು ಮಾತನಾಡುವ ರೀತಿಯಲ್ಲೇ ಇದು ಗೊತ್ತಾಗುತ್ತದೆ ಎಂದು ಕೂಡಲಸಂಗಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಸಿಡಿ ರಹಸ್ಯದ ಕುರಿತು ಸಿಬಿಐ ತನಿಖೆಯಾಗಲಿ. ಜಮೀರ್ ಅಹ್ಮದ್, ಕೆ.ಜೆ.ಜಾರ್ಜ್, ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಗುತ್ತಿದೆ. ಇದಕ್ಕೆ ಕಾರಣ ಸಿಡಿ. ನನ್ನ ಬಳಿ ಸಿಡಿ ಇದ್ದಿದ್ರೆ ನಾನು ಡಿಸಿಎಂ ಆಗುತ್ತಿದ್ದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಯತ್ನಾಳ್ ಬಳಿ ಸಿಡಿ ಇದೆ ಎಂಬ ಹೆಚ್ ವಿಶ್ವನಾಥ ಹೇಳಿಕೆಗೆ ಇಂತಹ ಹೊಲಸು ಕೆಲಸ ನಾ ಮಾಡೋದಿಲ್ಲ. ಮೌಲ್ಯಾಧಾರಿತ ಆಧಾರದ ಮೇಲೆ ರಾಜಕಾರಣ ಮಾಡುತ್ತೇನೆ. ನಾನು ಹೊಲಸು ರಾಜಕಾರಣ ಮಾಡಲ್ಲ ಎಂದು ಹೇಳಿ ಕಳಿಸಿದ್ದೆ ಎಂದು ಯತ್ನಾಳ್​ ಹೇಳಿದರು.

‘ಬಿಎಸ್​ವೈ ಮೊಮ್ಮಗ, ಸಂಬಂಧಿಕರೆಲ್ಲ ರಾಜಕೀಯದಲ್ಲಿದ್ದಾರೆ’
ಬಿಎಸ್​ವೈ ಮೊಮ್ಮಗ, ಸಂಬಂಧಿಕರೆಲ್ಲ ರಾಜಕೀಯದಲ್ಲಿದ್ದಾರೆ. ಪ್ರಧಾನಿ ಮೋದಿ ಆನುವಂಶಿಕ ರಾಜಕಾರಣ ವಿರೋಧಿಸಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿಗೆ ಅಭಿನಂದನೆಯನ್ನ ಸಲ್ಲಿಸುತ್ತೇನೆ. ಇವತ್ತು ಆನುವಂಶಿಕ ರಾಜಕಾರಣ ಮಾಡಿದವರ ಅಂತ್ಯವಾಗಿದೆ. ಲಾಲು ಪ್ರಸಾದ್​ ಯಾದವ್ ರಾಜಕೀಯ ಅಂತ್ಯವಾಗಿದೆ. ನೀವು ಮೊದಲು ಕುಟುಂಬ ರಾಜಕಾರಣದಿಂದ ಹೊರಬನ್ನಿ. ನೀವು ಸಿಎಂ ಆಗಬೇಕಲ್ಲಾ ಅದಕ್ಕೆ ಹೊರಬನ್ನಿ ಎಂದು ಯತ್ನಾಳ್ ಹೇಳಿದರು. ಸಿಎಂ ಪುತ್ರ ವಿಜಯೇಂದ್ರ ಚಮಚಾಗಳಿಗೆ ಹುದ್ದೆ ಸಿಗುತ್ತಿವೆ. ಬಿಜೆಪಿ ನಿಮ್ಮ ಸ್ವಂತ ಮನೆಯಲ್ಲ ಎಂದು ಸಹ ಹೇಳಿದರು.

3 ಸಚಿವ ಸ್ಥಾನ ಬ್ಲ್ಯಾಕ್‌ಮೇಲ್ ಮಾಡಿ ಪಡೆದುಕೊಂಡಿದ್ದಾರೆ, CD ತೋರಿಸಿ BSYರನ್ನ ಹೆದರಿಸಿದ್ದಾರೆ: ಯತ್ನಾಳ್