ನಾನು ಕಾಂಗ್ರೆಸ್ ಶಾಸಕ.. ನನ್ನ ಮಾತು ಯಾರೂ ಕೇಳ್ತಿಲ್ಲ -M.Y. ಪಾಟೀಲ್ ಅಸಹಾಯಕತೆ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಗ್ರಾಮಕ್ಕೆ ಭೀಮಾ ನದಿಯ ನೀರು ನುಗ್ಗಿ ಜಲಾವೃತಗೊಂಡಿದೆ. ಹಾಗಾಗಿ, ಇಂದು ಗ್ರಾಮದ ಪರಿಶೀಲನೆ ನಡೆಸಲು ಬಂದ ಕಾಂಗ್ರೆಸ್ ಶಾಸಕ M.Y. ಪಾಟೀಲ್‌ರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಭೀಮಾನದಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾರೂ ಬಂದಿಲ್ಲ. ಎಲ್ಲ ಮುಗಿದ ಬಳಿಕ ಈಗ ಬರುತ್ತಿದ್ದೀರಾ ಎಂದು M.Y. ಪಾಟೀಲ್‌ಗೆ ಘೇರಾವ್ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.

ತಮ್ಮಿಂದ ಗ್ರಾಮಕ್ಕೆ ನಿರ್ಲಕ್ಷ್ಯವಾಗಿರೋದನ್ನು ಶಾಸಕರು ತಪ್ಪೊಪ್ಪಿಕೊಂಡರು. ಆದರೆ, ನಾನು ಕಾಂಗ್ರೆಸ್ ಶಾಸಕ. ನನ್ನ ಮಾತು ಯಾರೂ ಕೇಳುತ್ತಿಲ್ಲ ಎಂದು ತಮ್ಮ ಅಸಹಾಯಕತೆ ಸಹ ವ್ಯಕ್ತಪಡಿಸಿದರು.

ಗ್ರಾಮಸ್ಥರನ್ನು ಸ್ಥಳಾಂತರ ಮಾಡದೆ ಬೇಜವಾಬ್ದಾರಿತನ ತೋರುತ್ತಿದ್ದ ತಾಲೂಕು ಆಡಳಿತದ ನಿಲುವಿನಗ ಬಗ್ಗೆ ಟಿವಿ 9 ನಿರಂತರ ವರದಿಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಶಾಸಕ ಪಾಟೀಲ್ ಸೊನ್ನ ಗ್ರಾಮದತ್ತ ದೌಡಾಯಿಸಿದ್ದರು. ಆಗ, MLAರನ್ನು ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡರು.

Related Tags:

Related Posts :

Category:

error: Content is protected !!