ಮೊಬೈಲ್ ದೋಚುತ್ತಿದ್ದ ಖದೀಮರಿಗೆ ಬಿತ್ತು ಸಿಕ್ಕಾಪಟ್ಟೆ ಧರ್ಮದೇಟು, ಎಲ್ಲಿ?

ತುಮಕೂರು: ಮೊಬೈಲ್​ ಕದ್ದು ಪರಾರಿಯಾಗ್ತಿದ್ದ ಮೂವರು ಮಹಾಶಯರಿಗೆ ಜನರಿಂದ ಸಿಕ್ಕಾಪಟ್ಟೆ ಗೂಸಾ ಬಿದ್ದಿರುವ ಘಟನೆ ಜಿಲ್ಲೆಯ ಬ್ಯಾತ ಗ್ರಾಮದಲ್ಲಿ ನಡೆದಿದೆ.

ಕೈಯಲ್ಲಿ ಚಾಕು ಹಿಡಿದು ಜನರನ್ನು ಬೆದರಿಸುತ್ತಿದ್ದ ಮೂವರು ಮೊಬೈಲ್​ ಹಾಗೂ ಸರಗಳ್ಳತನದಲ್ಲಿ ನಿಸ್ಸೀಮರಂತೆ. ನಿನ್ನೆ ನಗರದ ಭದ್ರಮ್ಮ ವೃತ್ತದ ಬಳಿ ವ್ಯಕ್ತಿಯೊಬ್ಬನಿಂದ ಮೊಬೈಲ್ ದೋಚಲು ಯತ್ನಸಿದ್ದ ಗ್ಯಾಂಗ್ ಅತ ವಿರೋಧಿಸಿದಕ್ಕೆ ಮನಸ್ಸೋಯಿಚ್ಛೆ ಹಲ್ಲೆ ಮಾಡಿ ಮೊಬೈಲ್​ ಕಿತ್ತುಕೊಂಡರಂತೆ.

ನಂತರ ಸೋಮೇಶ್ವರ ಬಡಾವಣೆಯಲ್ಲೂ ಶಮಂತ್ ಎಂಬಾತನಿಗೆ ಚಾಕುವಿನಿಂದ ಹಲ್ಲೆಗೈದು ಬಳಿಕ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಈ ಮಧ್ಯೆ ಇದನ್ನು ಗಮನಿಸಿದ ಜನರು ಕಳ್ಳರನ್ನ ಚೇಸ್​ ಮಾಡಿ ಕೊನೆಗೆ ಬ್ಯಾತ ಗ್ರಾಮದ ಬಳಿ ಹಿಡಿದಿದ್ದಾರೆ.

ಈಗಾಗಲೇ ಸಿಟ್ಟಿಗೆದ್ದಿದ್ದ ಜನರು ಮತ್ತು ಗ್ರಾಮಸ್ಥರು ಮೂವರು ಖದೀಮರನ್ನ ಹಿಡಿದು ಚೆನ್ನಾಗಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ನಂತರ ಆರೋಪಿಗಳನ್ನು ಕ್ಯಾತಸಂದ್ರ ಪೊಲೀಸರಿಗೆ ಒಪ್ಪಿಸಿದರು.

Related Tags:

Related Posts :

Category:

error: Content is protected !!