Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar status: ಆಧಾರ್​ ಸ್ಥಿತಿಯನ್ನು ಆನ್​ಲೈನ್​ನಲ್ಲಿ ತಿಳಿಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ

ಆಧಾರ್​ಗೆ ಅರ್ಜಿ ಸಲ್ಲಿಸಿದ್ದರೆ ಅಥವಾ ಮಾಹಿತಿ ಅಪ್​ಡೇಟ್ ಮಾಡಲು ಅರ್ಜಿ ಹಾಕಿದ್ದಲ್ಲಿ ಅದರ ಸ್ಥಿತಿಯನ್ನು ಆನ್​ಲೈನ್​ನಲ್ಲಿ ಪರಿಶೀಲಿಸುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

Aadhaar status: ಆಧಾರ್​ ಸ್ಥಿತಿಯನ್ನು ಆನ್​ಲೈನ್​ನಲ್ಲಿ ತಿಳಿಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 10, 2022 | 2:28 PM

ಆಧಾರ್​ ಕಾರ್ಡ್​ಗಾಗಿ ಅರ್ಜಿ ಹಾಕಿದ್ದೀರಾ ಅಥವಾ ಅದರಲ್ಲಿ ಕೆಲವು ಮಾಹಿತಿ ಅಪ್​ಡೇಟ್​ ಮಾಡಬೇಕು ಅಂತೇನಾದರೂ ಅಪ್ಲೈ ಮಾಡಿದ್ದೀರಾ? ನಿಮಗೆ ಆ ಅರ್ಜಿಯ ಸ್ಥಿತಿ ಏನು ಎಂದು ತಿಳಿದುಕೊಳ್ಳಬೇಕಿದೆಯಾ? ನಿಮ್ಮ ಮನೆಯಲ್ಲೇ ಸ್ಮಾರ್ಟ್​ಫೋನ್ ಅಥವಾ ಕಂಪ್ಯೂಟರ್​ ಮೂಲಕ ಕೆಲವೇ ಸರಳ ಹಂತಗಳಲ್ಲಿ ಆ ಅರ್ಜಿಯ ಸ್ಥಿತಿಯನ್ನು ನೀವು ತಿಳಿಯಬಹುದು. ಆಧಾರ್​ ಸಂಖ್ಯೆಯು 12 ಅಂಕಿಯ ವಿಶಿಷ್ಟ ಗುರುತಾಗಿದ್ದು, ಅದನ್ನು ಭಾರತ ಸರ್ಕಾರ ತನ್ನ ಪ್ರತಿ ನಾಗರಿಕರಿಗೆ ನೀಡುತ್ತದೆ. ಎಲ್ಲ ಕಡೆಯೂ ಗುರುತಿನ ಸಲುವಾಗಿ ಇದನ್ನು ಬಳಸಲಾಗುತ್ತದೆ. ಅದು ಬ್ಯಾಂಕ್ ಖಾತೆ ತೆರೆಯುವುದರಿಂದ ಮೊದಲುಗೊಂಡು ಸಾಮಾಜಿಕ ಯೋಜನೆಗಳ ತನಕ ಹಾಗೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರೆಗೆ ಬಳಕೆ ಆಗುತ್ತದೆ. ಆದರೆ ಆಧಾರ್​ ಅನ್ನು ಅಧಿಕೃತ ಉದ್ದೇಶಗಳಿಗಾಗಿ ಬಳಸಬೇಕು ಅಂತಾದಾಗ ಅದನ್ನು ಸರಿಯಾದ ಮಾಹಿತಿಯೊಂದಿಗೆ ಅಪ್​ಡೇಟ್ ಮಾಡಬೇಕು.

ಹೊಸ ಆಧಾರ್​ಗಾಗಿ ಆಧಾರ್ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿದ ನಂತರ ಯುಐಡಿಎಐ ವೆಬ್​ಸೈಟ್​ನಲ್ಲಿ ಅದರ ಸ್ಥಿತಿಗತಿ ಪರಿಶೀಲಿಸಬಹುದು. ಅದಕ್ಕಾಗಿ ಎನ್​ರೋಲ್​ಮೆಂಟ್ ಐಡಿ ಮತ್ತು ದಿನಾಂಕವನ್ನು ನಮೂದಿಬೇಕಾಗುತ್ತದೆ. ಆನ್​ಲೈನ್​ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಎಂಬ ಹಂತಹಂತವಾದ ಮಾಹಿತಿ ಹೀಗಿದೆ.

– ಆಧಾರ್ ಅರ್ಜಿ ಸ್ಥಿತಿಯನ್ನು ತಿಳಿಯಲು ಮೊದಲಿಗೆ ಯುಐಎಡಿಐ ಅಧಿಕೃತ ವೆಬ್​ಸೈಟ್​ ಲಿಂಕ್- https://resident.uidai.gov.inಗೆ ತೆರಳಬೇಕು. – “My Aadhaar” ಎಂಬುದರ ಮೇಲೆ ಒತ್ತಬೇಕು. – ಆ ಮೂಲಕ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ “Get Aadhaar” ವಿಭಾಗದ ಅಡಿಯಲ್ಲಿ Check Aadhaar Status ಎಂಬುದರ ಮೇಲೆ ಕ್ಲಿಕ್ ಮಾಡಬೇಕು. – ಈಗ ಎನ್​ರೋಲ್​ಮೆಂಟ್ ಐಡಿ ಮತ್ತು ದಿನಾಂಕವನ್ನು ನಮೂದಿಸಬೇಕು. – “Captcha” ವೆರಿಫೈ ಮಾಡಿ ಖಾತ್ರಿ ಪಡಿಸಬೇಕು – ಅಂತಿಮವಾಗಿ “Check Status” ಎಂಬುದನ್ನು ಒತ್ತಬೇಕು.

ಎನ್​ರೋಲ್​ಮೆಂಟ್ ಐಡಿ ಕಳೆದುಕೊಂಡಿದ್ದಲ್ಲಿ ಆಧಾರ್ ಅರ್ಜಿಯ ಸ್ಥಿತಿ ಪರಿಶೀಲನೆ ಹೇಗೆ? ಆಧಾರ್ ಸ್ಥಿತಿಯನ್ನು ಆನ್​ಲೈನ್​ನಲ್ಲಿ ಪರೀಕ್ಷಿಸುವುದಕ್ಕೆ ಇರುವ ಏಕೈಕ ಆಯ್ಕೆ ಎನ್​ರೋಲ್​ಮೆಂಟ್ ಐಡಿ. ಒಂದು ವೇಳೆ ಅದನ್ನು ಕಳೆದುಕೊಂಡರೆ ಏನು ಮಾಡುವುದು? ಯೋಚಿಸುವ ಅಗತ್ಯ ಇಲ್ಲ. ಯುಐಡಿಎಐ ಅಧಿಕೃತ ವೆಬ್​ಸೈಟ್​ಗೆ ತೆರಳಿ ಇಐಡಿ ಪಡೆಯಬಹುದು.

ಇಐಡಿ ಪಡೆಯುವುದು ಹೇಗೆ? ಹಂತ 1: ಯುಐಎಡಿಐ ಅಧಿಕೃತ ವೆಬ್​ಸೈಟ್​ ಲಿಂಕ್- https://resident.uidai.gov.inಗೆ ತೆರಳಬೇಕು. ಹಂತ 2: “My Aadhaar” ಎಂಬುದರ ಮೇಲೆ ಒತ್ತಬೇಕು. ಹಂತ 3: “Get Aadhaar” ಎಂಬುದರ ಅಡಿಯಲ್ಲಿ “Retrieve Lost or Forgotten EID/UID” ಕ್ಲಿಕ್ ಮಾಡಬೇಕು. ಹಂತ 4: ಆ ಮೂಲಕ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಆಧಾರ್ ಸಂಖ್ಯೆಯನ್ನು, ಪೂರ್ತಿ ಹೆಸರು, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ನಮೂದಿಸಬೇಕು. ಹಂತ 5: Captcha ಖಾತ್ರಿಪಡಿಸಬೇಕು ಮತ್ತು Send OTP ಎಂಬುದರ ಮೇಲೆ ಒತ್ತಬೇಕು. ಹಂತ 6: ಇಐಡಿ ಪಡೆಯುವುದಕ್ಕೆ ಒಟಿಪಿ ನಮೂದಿಸಬೇಕು. ಹಂತ 7: ಒಂದು ಸಲ ಇಐಡಿ ಪಡೆದ ಮೇಲೆ ಮೇಲ್ಕಂಡ ಹಂತಗಳನ್ನು ಅನುಸರಿಸಿ ಆನ್​ಲೈನ್​ನಲ್ಲಿ ಆಧಾರ್ ಸ್ಥಿತಿಯನ್ನು ತಿಳಿಯಬಹುದು.

ಇದನ್ನೂ ಓದಿ: PAN- Aadhaar Linking: ನಿಗದಿತ ಗಡುವಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ರೂ. 10 ಸಾವಿರ ದಂಡ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ