ಮಳೆಗಾಲಕ್ಕೆ ಮುನ್ನೆಚ್ಚರಿಕೆ: ಮಡಿಕೇರಿಗೆ NDRF ಟೀಂ ಆಗಮನವಾಯ್ತು!

ಮಡಿಕೇರಿ: ಮಳೆಗಾಲ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿ ಮೇರೆಗೆ ಜಿಲ್ಲೆಗೆ ಎನ್‌ಡಿ‌ಆರ್‌ಎಫ್ ತಂಡ ಆಗಮಿಸಿದೆ. ಆಂಧ್ರ ಪ್ರದೇಶದಿಂದ 10 ನೇ ಬ್ಯಾಚ್‌ನ 25 ನುರಿತ ಸಿಬ್ಬಂದಿಗಳು ಆಗಮಿಸಿದ್ದಾರೆ. ಭೂ ಕುಸಿತ, ಪ್ರವಾಹ ಹಾಗೂ ಕಟ್ಟಡ ಧ್ವಂಸ ಸೇರಿದಂತೆ ಮತ್ತಿತರ ತುರ್ತು ಸನ್ನಿವೇಶಗಳಲ್ಲಿ ಇವರು ಸ್ಪಂದಿಸಲಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ನೈಸರ್ಗಿಕ ವಿಕೋಪವನ್ನು ಈ ತಂಡ ಈಗಾಗಲೇ ಎದುರಿಸಿದೆ. ಇಂಫಾನ್ ಚಂಡ ಮಾರುತ ಕಾರ್ಯ ಮುಗಿಸಿರುವ ತಂಡ ಕಮಾಂಡಿಂಗ್ ಆಫೀಸರ್ ಆರ್.ಕೆ.ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದೆ. ರಕ್ಷಣಾ ಕಾರ್ಯಾಚರಣೆಯ ಅಗತ್ಯ ಪರಿಕರಗಳೊಂದಿಗೆ ಸಿಬ್ಬಂದಿ ಮಡಿಕೇರಿಯ ಮೈತ್ರಿ ಹಾಲ್‌ನಲ್ಲಿ ವಾಸ್ತವ್ಯ ಹೂಡಿದ್ದು, ಮಳೆಗಾಲದ ಕೊನೆವರೆಗೆ ಜಿಲ್ಲೆಯಲ್ಲೇ ಇರಲಿದ್ದಾರೆ. ಭೂ ಕುಸಿತ, ಪ್ರವಾಹದ ಸಂದರ್ಭದಲ್ಲಿ ಸಾರ್ವಜನಿಕರನ್ನ ರಕ್ಷಣೆ ಮಾಡುವ ಹೊಣೆಯನ್ನ ಈ ಟೀಂ ಹೊರಲಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more