ಕ್ವಾರಂಟೈನ್ ಕೇಂದ್ರದಲ್ಲಿ ವಲಸೆ ಕಾರ್ಮಿಕರ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಆಕ್ರೋಶ

ಯಾದಗಿರಿ: ಕಳೆದ 10 ದಿನಗಳ ಹಿಂದೆಯೇ ಕೊರೊನಾ ಟೆಸ್ಟ್‌ಗಾಗಿ ಗಂಟಲು ದ್ರವ ಪಡೆದರೂ ಇನ್ನೂ ಟೆಸ್ಟ್‌ ವರದಿ ನೀಡದಿರುವುದಕ್ಕೆ ಆಕ್ರೋಶಗೊಂಡಿರುವ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಸುಮಾರು 200 ವಲಸೆ ಕಾರ್ಮಿಕರನ್ನ 14 ದಿನಗಳ ಹಿಂದೆಯೇ ಯಾದಗಿರಿಯ ಕಾಳಬೆಳಗುಂದಿ ಬಳಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೇನೆ 10 ದಿನಗಳ ಹಿಂದೆ ಕೊರೊನಾ ಸೋಂಕಿನ ಟೆಸ್ಟ್‌ಗಾಗಿ ಗಂಟಲು ದ್ರವ ಪಡೆದರೂ ಇನ್ನೂ ಅದರ ಫಲಿತಾಂಶ ನೀಡಿಲ್ಲ. ಹೀಗಾಗಿ ಆಕ್ರೋಶಗೊಂಡಿದ್ದ ವಲಸೆ ಕಾರ್ಮಿಕರು ಗಂಟು ಮೂಟೆ ಸಮೇತ ಪ್ರತಿಭಟನೆ ನಡೆಸಿದರು.

ಕಳೆದ 14 ದಿನಗಳಿಂದ ಇಲ್ಲಿದ್ದೇವೆ. ಕರೆ ಮಾಡಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮನ್ನು ನಮ್ಮ ಊರಿಗೆ ಹೋಗಲು ಬಿಡಿ ಎಂದು ಗೇಟ್ ವರೆಗೆ ಬಂದ ವಲಸೆ ಕಾರ್ಮಿಕರು ಸ್ಥಳದಲ್ಲಿದ್ದ ಮೇಲ್ವಿಚಾರಕರನ್ನ ಒತ್ತಾಯಿಸಿದರು.

Related Tags:

Related Posts :

Category:

error: Content is protected !!