ಮನೆ, ಅಂಗಡಿಯಲ್ಲಿ ಪ್ರತ್ಯಕ್ಷಗೊಂಡಿದ್ದ ಹಾವುಗಳು ಅರಣ್ಯಕ್ಕೆ ಶಿಫ್ಟ್​!

ರಾಯಚೂರು: ಇತ್ತೀಚೆಗೆ ನಗರದ ವಿವಿಧೆಡೆ ಮನೆ, ಅಂಗಡಿಗಳಲ್ಲಿ ಪ್ರತ್ಯಕ್ಷಗೊಂಡಿದ್ದ ಹಾವುಗಳನ್ನ ಸ್ನೇಕ್ ಅಪ್ಸರ್ ಎಂಬುವರು ಹಿಡಿದು ರಕ್ಷಿಸಿದ್ದರು. ಇದೀಗ ನಗರದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹಾವುಗಳನ್ನು ಅಪ್ಸರ್ ಬಿಟ್ಟಿದ್ದಾರೆ.

ಹಾವುಗಳನ್ನು ಕಂಡ ಕೂಡಲೇ ಜನರು ಭೀತಿಗೊಳಗಾಗಿ ಜನ ಹಾವುಗಳನ್ನ ಸಾಯಿಸ್ತಾರೆ. ಹಾಗಾಗಿ ಹಾವುಗಳನ್ನ ಹಿಡಿಯುವ ತರಬೇತಿ ಪಡೆದಿರುವ ಅಪ್ಸರ್, ನಗರದ ವಿವಿಧೆಡೆ 27ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದರು. ಇಂದು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಾವುಗಳನ್ನು ರಿಲೀಸ್ ಮಾಡಿದ್ದಾರೆ.Related Posts :

Category:

error: Content is protected !!