ಆಹಾರ ತಯಾರಿಕಾ ಕಂಪನಿಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ, ಆತಂಕದಲ್ಲಿ ಬೆಂಗಳೂರು!

ಬೆಂಗಳೂರು: ಕೊರೊನಾ ಈಗ ಹೇಗೆ ಮತ್ತು ಯಾವ ರೀತಿ ವಕ್ಕರಿಸುತ್ತೆ ಅನ್ನೋದು ಗೊತ್ತಾಗ್ತಿಲ್ಲ. ಯಾಕಂದ್ರೆ ಲಾಕ್ ಡೌನ್ ಮಾಡಿ ಹೋಗು ಪಿಶಾಚಿ ಅಂದ್ರೆ ಬಂದೆ ಫುಡ್ ಪಾಕೆಟ್‌ನಲ್ಲಿ ಅಂತಾ ಈಗ ರೆಡಿಮೇಡ್ ಆಹಾರ ತಯಾರಿಸುವ ಕಂಪನಿಯೊಂದರ ಸಿಬ್ಬಂದಿಗಳಿಗೇನೆ ವಕ್ಕರಿಸಿದೆ.

ಹೌದು ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಮಸಾಲೆ ಪದಾರ್ಥಗಳನ್ನ ತಯಾರಿಸುವ ಪ್ರಖ್ಯಾತ ಖಾಸಗಿ ಕಂಪನಿಯ 30ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಈಗ ಕೊರೊನಾ ಸೋಂಕು ತಗುಲಿದೆ. ವಾರದ ಹಿಂದೆ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ನೌಕರನಿಗೆ ಸೋಂಕು ತಗುಲಿತ್ತು. ಇದು ಕನ್‌ಫರ್ಮ್ ಆಗುತ್ತಿದ್ದಂತೆ 40ಕ್ಕೂ ಹೆಚ್ಚು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು.

ಈಗ ಈ ಸಿಬ್ಬಂದಿಗಳ ಕೊರೊನಾ ಟೆಸ್ಟ್ ವರದಿ ಬಂದಿದೆ. ಇದರಲ್ಲಿ 30ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಇರೋದು ದೃಡವಾಗಿದೆ. ಇವರೆಲ್ಲಾ ಮೂಲ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದೋರು. ಹೀಗಾಗಿ ಜಿಲ್ಲಾಡಳಿತ ಆಹಾರ ತಯಾರಿಸುವ ಖಾಸಗಿ ಕಂಪನಿಯನ್ನ ಸೀಲ್‌ಡೌನ್ ಮಾಡಿದೆ. ಆದ್ರೆ ಇದುವರೆಗೆ ಮಾರುಕಟ್ಟೆಗೆ ಹೋದ ಆಹಾರದ ಪಾಕೆಟ್‌ಗಳನ್ನು ಕೂಡಾ ಹಿಂಪಡೆಯಲು ಜೀಲ್ಲಾಡಳಿತ ಸೂಚಿಸುತ್ತಾ ಹೇಗೆ ಅನ್ನೋದನ್ನ ಕಾದು ನೋಡಬೇಕಿದೆ.

Related Tags:

Related Posts :

Category:

error: Content is protected !!